- Advertisement -
- Advertisement -
ಬೆಳ್ತಂಗಡಿ : ಒಂಟಿ ಸಲಗ ಕಾರಿನ ಮೇಲೆ ನ.27 ರಂದು ರಾತ್ರಿ ದಾಳಿ ಮಾಡಿ ಇಬ್ಬರಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಇಂದು ನೆರಿಯ ಗ್ರಾಮಕ್ಕೆ ಎಸಿಎಫ್ ಶ್ರೀಧರ್ ನ. 28 ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬಯಲು ಎಂಬಲ್ಲಿ ಸೋಮವಾರ ರಾತ್ರಿ ಅಲ್ಟೋ ಕಾರಿನ ಮೇಲೆ ದಾಳಿ ಮಾಡಿದ್ದು. ಕಾರಿನಲ್ಲಿದ್ದ ಏಳು ಜನರಲ್ಲಿ ಇಬ್ಬರಿಗೆ ಕಾಲು ಮುರಿತವಾಗಿದ್ದು. ರಾತ್ರಿಯೇ ಬೆಳ್ತಂಗಡಿ ಅರಣ್ಯಾಧಿಕಾರಿಗಳು ರಾತ್ರಿ ಭೇಟಿ ಮಾಡಿದ್ದರು.
ಇಂದು ಸಂಜೆ ಮಂಗಳೂರು ಎಸಿಎಫ್ ಶ್ರೀಧರ್ ನೆರಿಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಆನೆ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಎಸಿಎಫ್ ಭೇಟಿ ವೇಳೆ ಡಿ.ಆರ್.ಫ್.ಓ ಯಾತೀಂದ್ರ ಮತ್ತು ಅರಣ್ಯ ಗಸ್ತುಪಾಲಕ ಅಖಿಲೇಶ್ ಜೊತೆಯಲ್ಲಿದ್ದರು
- Advertisement -