Friday, June 5, 2026
Homeತಾಜಾ ಸುದ್ದಿಶಿರಾಡಿ ಘಾಟ್‌ – ಮಂಗಳೂರು ಹೈವೇಯಲ್ಲಿ ಕಾಡಾನೆ ಪ್ರತ್ಯಕ್ಷ: ಆನೆ ಆರ್ಭಟಕ್ಕೆ ವಾಹನ ಸವಾರರು ಗಾಬರಿ

ಶಿರಾಡಿ ಘಾಟ್‌ – ಮಂಗಳೂರು ಹೈವೇಯಲ್ಲಿ ಕಾಡಾನೆ ಪ್ರತ್ಯಕ್ಷ: ಆನೆ ಆರ್ಭಟಕ್ಕೆ ವಾಹನ ಸವಾರರು ಗಾಬರಿ

- Advertisement -
- Advertisement -

ದಕ್ಷಿಣ ಕನ್ನಡ: ಶಿರಾಡಿ ಘಾಟ್ ಮತ್ತು ಮಂಗಳೂರು ಹೈವೆಯಲ್ಲಿ ಇಂದು ಮಧ್ಯಾಹ್ನ ಗಜರಾಜ ಪ್ರತ್ಯಕ್ಷನಾಗಿದ್ದಾನೆ. ರಸ್ತೆ ಮಧ್ಯಕ್ಕೆ ಬಂದು ವಾಹನ ಸವಾರರಿಗೆ ಕಾಡಾನೆ ಉಪಟಳ ಕೊಟ್ಟಿದೆ. ಆನೆ ಆರ್ಭಟಕ್ಕೆ ವಾಹನ ಸವಾರರು ವಾಹನವನ್ನು  ಬಿಟ್ಟು ಚೆಲ್ಲಾಪಿಲ್ಲಿಯಾಗಿ ಕಾಲು ಕಿತ್ತಿದ್ದಾರೆ.

ಮಧ್ಯಹ್ನಾ 12:30ರ ಸಮಯಕ್ಕೆ ಘಟನೆ ನಡೆದಿದೆ. ಕಳೆದ ಕೆಲ‌ದಿನಗಳಿಂದ ಕಾಡಾನೆ ರಸ್ತೆಗೆ ಬಂದು ವಾಹನಗಳಿಗೆ ಅಡ್ಡ ನಿಂತು  ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡ್ತಿದೆ ಎಂದು ಹೇಳಲಾಗ್ತಿದೆ. ಹಾಗೇ ಇಂದು ನಡೆದ ಘಟನೆಯ ವೇಳೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಹೆದರಿ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ.

- Advertisement -

Latest News

error: Content is protected !!