- Advertisement -
![]()
- Advertisement -
ಸುಳ್ಯ; ಆನೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ನಡೆದಿದೆ. ದಬ್ಬಡ ಕೊಪ್ಪದ ಶಿವಪ್ಪ (72) ಮೃತ ದುರ್ದೈವಿ.
ಶಿವಪ್ಪ ಅವರು ಆ.06 ರಂದು ರಾತ್ರಿ 10.30 ರ ಸಮಯಕ್ಕೆ ಮನೆಯ ಹತ್ತಿರ ನಾಯಿ ಬೊಗಳುತ್ತಿದೆ ಎಂದು ತೋಟದ ಬಳಿ ಹೋದಾಗ ಆನೆ ತುಳಿದಿದೆ. ಅವರನ್ನು ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತಪಟ್ಟಿದ್ದಾರೆನ್ನಲಾಗಿದೆ. ಇದೀಗ ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
- Advertisement -


