- Advertisement -
- Advertisement -
ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ 25 ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ 4 ಸ್ಥಾಯೀ ಸಮಿತಿ ಸದಸ್ಯರ ಚುನಾವಣೆಯು ಸೆ.19 ಗುರುವಾರದಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಚುನಾವಣೆಯು ಜರಗಲಿದೆ.
ಬಿಜೆಪಿ ಪಕ್ಷದಿಂದ ಮೇಯರ್ ಅಭ್ಯರ್ಥಿಯಾಗಿ ಪಾಲಿಕೆಯ ಮುಂದಿನ ಅವಧಿಗೆ ದೇರೆಬೈಲ್ ಉತ್ತರ ವಾರ್ಡ್‌ನ ಮನೋಜ್ ಕುಮಾರ್, ಉಪಮೇಯರ್ ಅಭ್ಯರ್ಥಿಯಾಗಿ ಬೋಳಾರ ವಾರ್ಡ್‌ನ ಭಾನುಮತಿ ಪಿ.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ದ.ಕ. ಜಿಲ್ಲಾ ಕಚೇರಿಯ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆಯು ನಡೆಯಿತು.
- Advertisement -