Sunday, February 16, 2025
Homeಕರಾವಳಿಮಚ್ಚಿನ ಸಿ.ಎ ಬ್ಯಾಂಕ್ ಚುನಾವಣೆ; ಬಿಜೆಪಿ ಬೆಂಬಲಿತ ಸದಸ್ಯರಿಂದ ಸತತ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ

ಮಚ್ಚಿನ ಸಿ.ಎ ಬ್ಯಾಂಕ್ ಚುನಾವಣೆ; ಬಿಜೆಪಿ ಬೆಂಬಲಿತ ಸದಸ್ಯರಿಂದ ಸತತ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಮಚ್ಚಿನ ಸಿ.ಎ ಬ್ಯಾಂಕ್ ನ ಆಡಳಿತ ಮಂಡಳಿಯ ಮುಂದಿನ 5ವರ್ಷದ ಅವಧಿಯ ಅಧಿಕಾರಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಡಿ.15 ರಂದು ಚುನಾವಣೆಯನ್ನು ನಡೆಸಿದ್ದು, ಬಿಜೆಪಿ ಬೆಂಬಲಿ ಸದಸ್ಯರು ಮೇಲುಗೈ ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲ 12 ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿದಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಉಮೇಶ, ಚಿತ್ತರಂಜನ್, ಜಯರಾಮ, ಪದ್ಮನಾಭ ಸಾಲಿಯಾನ್ ವಡ್ಡ, ಮೋಹನ್ ಗೌಡ, ಕೆ. ಶ್ರೀಧ‌ರ್ ಪೂಜಾರಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ತುಂಗಪ್ಪ ಯಾನೆ ಶ್ರೀಧರ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಗಣೇಶ್ ಅರ್ಕಜೆ, ಮಹಿಳಾ ಕ್ಷೇತ್ರದಿಂದ ಬೇಬಿ, ಸುಜಾತ ಪಿ. ಸಾಲ್ಯಾನ್, ಪ. ಪಂಗಡ ಕ್ಷೇತ್ರದಿಂದ ರಾಜೇಶ್ ನಾಯ್ಕ, ಪ. ಜಾತಿ ಕ್ಷೇತ್ರದಿಂದ ಆನಂದ ಗೆಲುವನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!