Tuesday, June 6, 2023
Homeಕರಾವಳಿಬೆಳ್ತಂಗಡಿ : ಚುನಾವಣಾ ಪೂರ್ವ ತಯಾರಿ ಹಿನ್ನೆಲೆ:ಶಿಬಾಜೆ ಗ್ರಾಮಕ್ಕೆ ಎಸ್ಪಿ ವಿಕ್ರಮ್ ಅಮಟೆ ಭೇಟಿ

ಬೆಳ್ತಂಗಡಿ : ಚುನಾವಣಾ ಪೂರ್ವ ತಯಾರಿ ಹಿನ್ನೆಲೆ:ಶಿಬಾಜೆ ಗ್ರಾಮಕ್ಕೆ ಎಸ್ಪಿ ವಿಕ್ರಮ್ ಅಮಟೆ ಭೇಟಿ

- Advertisement -
- Advertisement -

ಬೆಳ್ತಂಗಡಿ : ಚುನಾವಣಾ ಪೂರ್ವ ತಯಾರಿ ಹಿನ್ನೆಲೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಂಡ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿರು ಚುನಾವಣಾ ಬೂತ್ ಶಾಲೆ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು ಚುನಾವಣೆಯ ಬಗ್ಗೆ ಮಾಹಿತಿ ನೀಡಿದರು.

ಚುನಾವಣೆ ನಡೆಯುವ ಬೂತ್ ಗಳಾದ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ, ಪೆರ್ಲ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಶಿಬಾಜೆ ಗ್ರಾಮದ ಕುರುಂಜ ದಲಿತ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಜನರೊಂದಿಗೆ ಸಭೆ ನಡೆಸಿ ಕುಂದು ಕೊರತೆಯನ್ನು ಆಲಿಸಿ. ಚುನಾವಣೆ ಎದುರಿಸುವ ಬಗ್ಗೆ ಅರಿವು ಮೂಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಭೇಟಿ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್.ಕುಮಾರ್.ಡಿ , ಬೀಟ್ ಸಿಬ್ಬಂದಿ ಶಶಿಧರ್, ಗುಪ್ತವಾರ್ತೆ ಸಿಬ್ಬಂದಿ ಪ್ರಶಾಂತ್, ಚಾಲಕ ಲೋಕೇಶ್ ಭಾಗಿಯಾಗಿದ್ದರು‌.

- Advertisement -

Latest News

error: Content is protected !!