Monday, June 8, 2026
Homeತಾಜಾ ಸುದ್ದಿಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 8 ಕೊರೋನಾ ಸೋಂಕಿತರ ಸಜೀವ ದಹನ

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 8 ಕೊರೋನಾ ಸೋಂಕಿತರ ಸಜೀವ ದಹನ

- Advertisement -
- Advertisement -

ಅಹಮದಾಬಾದ್: ಇಲ್ಲಿಯ ನವರಂಗಪುರ ಪ್ರದೇಶದ ನಿಗದಿಪಡಿಸಿದ ಕೋವಿಡ್-19 ಶ್ರೇಯ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ.

ಮೃತರಲ್ಲಿ ಐವರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದಾರೆ. ಸುಮಾರು 40 ಕೋವಿಡ್-19 ರೋಗಿಗಳನ್ನು ರಕ್ಷಿಸಲಾಗಿದ್ದು, ಅವರನ್ನು ಎಎಂಸಿ ನಡೆಸುತ್ತಿರುವ ಎಸ್‌ವಿಪಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದಾರೆ.

ಶ್ರೇಯ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ದಾಖಲಾದ ಎಂಟು ಕೊರೊನಾ ವೈರಸ್ ರೋಗಿಗಳು ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಐಸಿಯು ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ ಎಂದು ಅಹಮದಾಬಾದ್ ಅಗ್ನಿಶಾಮಕ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1,073 ಹೊಸ ಕೊರೊನಾ ವೈರಸ್ ಪ್ರಕರಣಗಳೊಂದಿಗೆ, ಗುಜರಾತ್‌ನಲ್ಲಿ ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆಯು ಬುಧವಾರ 66,777ಕ್ಕೆ ಏರಿಕೆಯಾಗಿದೆ. ಈವರೆಗೂ 2,557 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Latest News

error: Content is protected !!