Thursday, June 4, 2026
Homeಕರಾವಳಿಮಂಗಳೂರು: ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದಾತನ ಬಂಧನ:  4.20 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾತ್ರೆಗಳು...

ಮಂಗಳೂರು: ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದಾತನ ಬಂಧನ:  4.20 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾತ್ರೆಗಳು ವಶ

- Advertisement -
- Advertisement -

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಮಾರಲು ಯತ್ನಿಸುತ್ತಿದ್ದಾತನನ್ನು ನಗರದ ಉತ್ತರ ಠಾಣಾ ಪೊಲೀಸರು ಬಂಧಿಸಿ ಆತನಿಂದ 4.20 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಬಜ್ಪೆಯ ಮೊಹಮ್ಮದ್‌ ಬಶೀರ್‌ ಶಿಯಾಬ್‌ (34) ಬಂಧಿತ ಆರೋಪಿ.

ಮಂಗಳೂರು ಉತ್ತರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಗರಾಜ ಎಸ್‌. ಅವರ ನೇತೃತ್ವದ ತಂಡ ರಾವ್‌ ಆಯಂಡ್‌ ರಾವ್‌ ಸರ್ಕಲ್‌ ಮೈದಾನ 3ನೇ ಕ್ರಾಸ್‌ ರಸ್ತೆಯಲ್ಲಿ ಲಾಡ್ಜ್ ವೊಂದರ ಮುಂಭಾಗ ಹೋಂಡಾ ಆಕ್ಟಿವಾದಲ್ಲಿ ಎಂಡಿಎಂಎ ಮಾರಾಟ ಮಾಡಲು ನಿಂತುಕೊಂಡಿದ್ದ ಆರೋಪಿಯನ್ನು ಬಂಧಿಸಿದೆ.

ಆರೋಪಿಯಿಂದ 4.20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 105. 48 ಗ್ರಾಂ ಎಂಡಿಎಂಎ, 500 ರೂ. ಮೌಲ್ಯದ ತೂಕಮಾಪನ, 2,000 ರೂ. ಮೌಲ್ಯದ ಸ್ಟೀಲ್‌ ಚಾಕು, 10,600 ರೂ. ಮೌಲ್ಯದ 2 ಮೊಬೈಲ್‌ ಫೋನ್‌, ಸ್ಕೂಟರ್‌ ಸ್ವಾಧೀನಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!