Sunday, June 7, 2026
Homeಕರಾವಳಿಉಡುಪಿಕಾರ್ಕಳದಿಂದ ಮಣಿಪಾಲಕ್ಕೆ ಡ್ರೋನ್ ಮೂಲಕ 25 ನಿಮಿಷದಲ್ಲಿ ವೈದ್ಯಕೀಯ ಪರಿಕರ ರವಾನೆ

ಕಾರ್ಕಳದಿಂದ ಮಣಿಪಾಲಕ್ಕೆ ಡ್ರೋನ್ ಮೂಲಕ 25 ನಿಮಿಷದಲ್ಲಿ ವೈದ್ಯಕೀಯ ಪರಿಕರ ರವಾನೆ

- Advertisement -
- Advertisement -

ಉಡುಪಿ: ಡ್ರೋನ್ ಮೂಲಕ ಕಾರ್ಕಳದ ಟಿಎಂಎ ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವೈದ್ಯಕೀಯ ಪರಿಕರ ರವಾನಿಸಲಾಗಿದೆ.

ಪ್ರಾಯೋಗಿಕವಾಗಿ ಡ್ರೋನ್ ಮೂಲಕ ವೈದ್ಯಕೀಯ ಪರಿಕರ ರವಾನೆ ಮಾಡಲಾಗಿದ್ದು,
ಕಾರ್ಕಳದಿಂದ ಮಣಿಪಾಲಕ್ಕೆ 40 ಕಿಲೋ ಮೀಟರ್ ದೂರ ಡ್ರೋನ್ ಹಾರಿದೆ.

ರಸ್ತೆ ಮಾರ್ಗದಲ್ಲಿ ಕಾರ್ಕಳದಿಂದ ಮಣಿಪಾಲಕ್ಕೆ ಕನಿಷ್ಠ 1 ಗಂಟೆ ಸಮಯ ಬೇಕಾದರೆ
ಡ್ರೋನ್ ಮೂಲಕ ಕೇವಲ 25 ನಿಮಿಷಗಳಲ್ಲಿ ವೈದ್ಯಕೀಯ ಪರಿಕರಗಳನ್ನು ರವಾನೆ ಮಾಡಲಾಗಿದೆ.

ಭವಿಷ್ಯದ ತುರ್ತು ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಪ್ರಾಯೋಗಿಕವಾಗಿ ಕೆಎಂಸಿ ಆಸ್ಪತ್ರೆ ಈ ಹಾರಾಟ ಪರೀಕ್ಷೆ ನಡೆಸಿದೆ.

ಡ್ರೋನ್ ಮೂಲಕ ಸುಧಾರಿತ ಮತ್ತು ಕ್ಷಿಪ್ರಗತಿಯ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ
ಕರ್ನಾಟಕದ ಫೆರಿಫೆರಲ್ ಮತ್ತು ಟರ್ಶಿಯರಿ ಕೇರ್ ಆಸ್ಪತ್ರೆಗಳ ನಡುವೆ ಸ್ಯಾಂಪಲ್ ಸಾಗಿಸಲು ಡ್ರೋನ್ ಬಳಕೆ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.

- Advertisement -

Latest News

error: Content is protected !!