Sunday, May 5, 2024
Homeಕರಾವಳಿಬೆಳ್ತಂಗಡಿ : ಸರ್ವಿಸ್ ಮಾಡಿಸಲು ಚಾಲಕನಿಗೆ ಗೂಡ್ಸ್ ವಾಹನ ನೀಡಿದ ಮಾಲೀಕ: ತನ್ನ ಹೆಂಡತಿ ಮಕ್ಕಳನ್ನು...

ಬೆಳ್ತಂಗಡಿ : ಸರ್ವಿಸ್ ಮಾಡಿಸಲು ಚಾಲಕನಿಗೆ ಗೂಡ್ಸ್ ವಾಹನ ನೀಡಿದ ಮಾಲೀಕ: ತನ್ನ ಹೆಂಡತಿ ಮಕ್ಕಳನ್ನು ನೆನೆದು ಅವರನ್ನು ನೋಡಲು ಅದೇ ಗಾಡಿಯಲ್ಲಿ ತುಮಕೂರಿಗೆ ಹೋದ ಡ್ರೈವರ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಓನರ್

spot_img
- Advertisement -
- Advertisement -

ಬೆಳ್ತಂಗಡಿ : ತುಮಕೂರು ಜಿಲ್ಲೆಯಿಂದ ಉಜಿರೆಗೆ ಚಾಲಕ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ವಾಹನ ಸರ್ವಿಸ್ ಮಾಡಿಸಲು ಮಂಗಳೂರು ಕಳುಹಿಸಿದ್ದರು. ಈ ವೇಳೆ ತನ್ನ ಹೆಂಡತಿ ಮಕ್ಕಳನ್ನು ನೆನೆದು ಅದೇ ವಾಹನದಲ್ಲಿ ಊರಿಗೆ ಹೋಗಿದ್ದ. ವಾಹನ ಹಾಗೂ ಚಾಲಕ ವಾಪಸ್ ಬಾರದಿದ್ದರಿಂದ ಆತಂಕಗೊಂಡ ಮಾಲೀಕರು ಅನುಮಾನಗೊಂಡು ಬೆಳ್ತಂಗಡಿ ಪೊಲೀಸ್ ಠಾಣೆಗೆ ವಾಹನ ಕಾಣೆಯಾಗಿರುವ ಬಗ್ಗೆ ದೂರು ಅರ್ಜಿ ನೀಡಿದ್ದರು. ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಪ್ರಭಾಕರ್ ಹೆಗ್ಡೆ ಎಂಬವರ ಮಾಲೀಕತ್ವದ ಮಹಾವೀರ ಸೂಪರ್ ಮಾರ್ಕೆಟ್‌ ನಲ್ಲಿ ಅಶೋಕ್ ಲೈಲ್ಯಾಂಡ್ ದೋಸ್ ಗೂಡ್ಸ್ ವಾಹನ ಚಾಲಕನಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಪ್ರವೀಣ್(35) ಎಂಬವನ್ನು ಒಂದು ವಾರದ ಹಿಂದೆ ಕೆಲಸಕ್ಕೆ ಸೇರಿದ್ದ . ಜೂನ್ 21 ರಂದು ಎರಡು ಗೂಡ್ಸ್ ವಾಹನವನ್ನು ಸರ್ವಿಸ್ ಮಾಡಿಸಲು ಮಂಗಳೂರಿಗೆ ಟ್ಯಾಂಕ್ ಫುಲ್ ಡಿಸೇಲ್ ಹಾಕಿಸಿ ಇಬ್ಬರು ಚಾಲಕರನ್ನು ಕಳುಹಿಸಿದ್ದರು ಆದ್ರೆ ಪ್ರವೀಣ್ ಇದ್ದ ವಾಹನ ವಾಪಸ್ ಬಂದಿರಲ್ಲಿಲ್ಲ ಇದರಿಂದ ಅನುಮಾನಗೊಂಡ ಮಾಲೀಕ ಪ್ರಭಾಕರ ಹೆಗ್ಡೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ವಾಹನ ಕಾಣೆ ಆಗಿರುವ ಬಗ್ಗೆ ದೂರು ಅರ್ಜಿ ನೀಡಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಎಲ್ಲಾ ಚೆಕ್ ಪೋಸ್ಟ್ ಹಾಗೂ ಚಾಲಕ ಪ್ರವೀಣ್ ಊರದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರಿಗೂ ಒಂದು ಮಾಹಿತಿ ರವಾನಿಸಿದ್ದರು.

ಅದೇ ದಿನ ಚಿಕ್ಕನಾಯಕನಹಳ್ಳಿ ಚೆಕ್ ಪೋಸ್ಟ್ ಪೊಲೀಸರು ಗೂಡ್ಸ್ ವಾಹನ ತಡೆದು ನಿಲ್ಲಿಸಿ ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು ತಕ್ಷಣವೇ ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ವೃಷಭ ಮತ್ತು ಕ್ರೈಂ ಪಿಸಿ ಚರಣ್ ಮತ್ತು ಮಾಲೀಕ ಪ್ರಭಾಕರ ಹೆಗ್ಡೆ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಪೊಲೀಸರ ಸಹಾಯದಿಂದ ಚಾಲಕ ಪ್ರವೀಣ್ ನನ್ನು ವಿಚಾರಣೆ ಮಾಡಿದಾಗ ವಾಹನದಲ್ಲಿ ಟ್ಯಾಂಕ್ ಫುಲ್ ಡಿಸೇಲ್ ಇತ್ತು . ತನ್ನ ಹೆಂಡತಿ ಮಕ್ಕಳ ನೆನಪು ಆಗಿದ್ದು ಅದಕ್ಕಾಗಿ ಅವರನ್ನು ನೋಡಿ ಬರಲು ಮಂಗಳೂರಿಗೆ ಹೋಗಿ ಅಲ್ಲಿಂದ ಊರಿಗೆ ಬಂದಿದ್ದೇನೆ. ನಾನು ವಾಹನ ಕಳ್ಳತನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದು ನಂತರ ಮಾಲೀಕರು ಪ್ರಕರಣವನ್ನು ಅಲ್ಲಿಯೇ ಸುಖಾಂತ್ಯಗೊಳಿಸಿ ವಾಹನವನ್ನು ಮರಳಿ ಉಜಿರೆಗೆ ತಂದು ಪ್ರಕರಣ ಅಂತ್ಯಗೊಳಿಸಿದ್ದಾರೆ.

- Advertisement -
spot_img

Latest News

error: Content is protected !!