Wednesday, June 24, 2026
Homeಕರಾವಳಿಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ  ಡಾ. ಆಲಿವರ್ ಗ್ಲಾಡ್ಸನ್...

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ  ಡಾ. ಆಲಿವರ್ ಗ್ಲಾಡ್ಸನ್ ಪಾಲನ್ನ ನಿಧನ

- Advertisement -
- Advertisement -

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿಭಾಗದ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಆಲಿವರ್ ಗ್ಲಾಡ್ಸನ್ ಪಾಲನ್ನ (84) ಅವರು ಗುರುವಾರ, ಆಗಸ್ಟ್ 7, 2025 ರಂದು  ಬೆಂಗಳೂರಿನಲ್ಲಿ ವಯೋಸಹಜ ಕಾರಣಗಳಿಂದ ನಿಧನರಾದರು.

ಅವರು ಪತ್ನಿ ಪ್ರೇಮಾ ಸರೋಜಿನಿ ಪಾಲನ್ನ,  ಪುತ್ರಿ ಸರಿತಾ ಸೋನ್ಸ್,  ಪುತ್ರರು, ಸುಧೀರ್ ಮತ್ತು ಸುದೀಪ್  ಹಾಗು ಎಂಟು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರು ಸಹೋದರ ರೋಲೆಂಡ್  ಪಾಲನ್ನ ಮತ್ತು ಸಹೋದರಿ ಎವೆಲಿನ್ ಅವರನ್ನು ಸಹ ಅಗಲಿದ್ದಾರೆ.

ಸಂತ ಫಿಲೋಮಿನಾ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಡಾ. ಪಾಲನ್ನ ಅವರು ಬೆಂಗಳೂರಿನಲ್ಲಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಮುಂದುವರೆಸಿದರು, ಎಎಂಸಿ ಎಂಜಿನಿಯರಿಂಗ್ ಕಾಲೇಜು, ಈಸ್ಟ್ ವೆಸ್ಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಮತ್ತೊಂದು ದಶಕದ ಕಾಲ ಸೇವೆ ಸಲ್ಲಿಸಿದರು. ಅವರು  ರಸಾಯನಶಾಸ್ತ್ರದಲ್ಲಿ ಹಲವಾರು ಪಠ್ಯಪುಸ್ತಕಗಳ ಲೇಖಕರೂ ಆಗಿದ್ದರು.

ಅಂತ್ಯಕ್ರಿಯೆಯು ಆಗಸ್ಟ್ 9, 2025 ರಂದು ಶನಿವಾರ ಮಧ್ಯಾಹ್ನ  3-30 ಕ್ಕೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಭಾರತೀಯ ಕ್ರಿಶ್ಚಿಯನ್ ಸ್ಮಶಾನದಲ್ಲಿ (ಗೇಟ್ 1) ನಡೆಯಲಿದೆ.

- Advertisement -

Latest News

error: Content is protected !!