- Advertisement -
- Advertisement -
ಉಡುಪಿ: ಡಾ. ಶಿವರಾಮ ಕಾರಂತ ಟ್ರಸ್ಟ್ ಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ.ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಶಿವರಾಮ ಕಾರಂತ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಡಾ. ಗಣನಾಥ ಎಕ್ಕಾರ್ ಅವರು ನೇಮಕಗೊಂಡಿದ್ದಾರೆ.
ಟ್ರಸ್ಟ್ ಸದಸ್ಯರಾಗಿ ಬೆಂಗಳೂರಿನ ಉಲ್ಲಾಸ್ ಕಾರಂತ, ಉಡುಪಿಯ ಡಾ. ಪ್ರಸಾದ್ ರಾವ್, ಆತ್ರಾಡಿ ಅಮೃತಾ ಶೆಟ್ಟಿ, ಡಾ. ಭಾರತಿ ಮರವಂತೆ, ಉಡುಪಿಯ ಸತೀಶ್ ಕೊಡವೂರು, ಮಣಿಪಾಲದ ಮಂಚಿ ರಮೇಶ್, ಸಂತೋಷ್ ನಾಯಕ್ ಪಟ್ಲ, ಕುಂದಾಪುರದ ಚೇತನ ತೆರಾಡಿ, ಜಿ.ಎಂ. ಶರೀಫ್ ಹೂಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.
- Advertisement -