Friday, April 19, 2024
Homeಕರಾವಳಿಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ರಕ್ಷಣಾ ಸಚಿವಾಲಯದಿಂದ ಟಿ-565 ಟ್ಯಾಂಕ್ ಕೊಡುಗೆ

ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ರಕ್ಷಣಾ ಸಚಿವಾಲಯದಿಂದ ಟಿ-565 ಟ್ಯಾಂಕ್ ಕೊಡುಗೆ

spot_img
- Advertisement -
- Advertisement -

ಧರ್ಮಸ್ಥಳ: ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್‌ ಕೊಡುಗೆಯಾಗಿ ನೀಡಲಾಯಿತು. ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ. 1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಇದು ಬಳಕೆಯಾಗಿದೆ.

ಇನ್ನು 40 ಟನ್‌ಗಳಷ್ಟು ತೂಕ ಹೊಂದಿರುವ ಟ್ಯಾಂಕ್ 9 ಅಡಿ ಎತ್ತರ, 27. 6ಅಡಿ ಉದ್ದ ಮತ್ತು 10.8 ಅಗಲ ಇದೆ. ಇದರ ಗರಿಷ್ಠ ವೇಗ ಗಂಟೆಗೆ 51 ಕಿ.ಮೀ. ಸಾಮರ್ಥ್ಯ ಹೊಂದಿದೆ. 1968ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು.  ಸೋವಿಯತ್ ಒಕ್ಕೂಟ ಸಿಬ್ಬಂದಿ ಇದರ ತಯಾರಕರಾಗಿದ್ದಾರೆ.

- Advertisement -
spot_img

Latest News

error: Content is protected !!