Saturday, June 6, 2026
Homeತಾಜಾ ಸುದ್ದಿರಕ್ತದಾನ ಮಾಡಿ ಇನ್ನೊಂದು ನಾಯಿ ಜೀವ ಉಳಿಸಿದ ಶ್ವಾನ

ರಕ್ತದಾನ ಮಾಡಿ ಇನ್ನೊಂದು ನಾಯಿ ಜೀವ ಉಳಿಸಿದ ಶ್ವಾನ

- Advertisement -
- Advertisement -

ಕೊಪ್ಪಳ: ರಕ್ತದಾನ ಮಾಡಿ ಶ್ವಾನವೊಂದು ಇನ್ನೊಂದು ನಾಯಿಯ ಜೀವ ಉಳಿಸಿದ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ  ನಗರದ 9 ವರ್ಷ ಲ್ಯಾಬ್ರಡಾರ್ ನಾಯಿಯೊಂದು ಅನಾರೋಗ್ಯಕ್ಕೆ ತುತ್ತಾಗಿ ಹಿಮೋಗ್ಲೊಬಿನ್ ಕಮ್ಮಿಯಾಗಿ ರಕ್ತದ ಅಗತ್ಯವಿತ್ತು. ಇದನ್ನು ಅರಿತ ವೈದ್ಯರು ನಗರದ ಮೂರು ನಾಯಿಗಳ ವಿಳಾಸಗಳನ್ನು ಸಂಪರ್ಕಿಸಿ ಅವುಗಳ ರಕ್ತದ ಸ್ಯಾಂಪಲ್  ಗಳನ್ನು ಸಂಗ್ರಹಿಸಿ ಟೆಸ್ಟ್ ಮಾಡಿದ್ದಾರೆ. ಮೂರು ನಾಯಿಗಳಲ್ಲಿ ಬಸವರಾಜ ಪೂಜಾರ್ ಎಂಬವರ  ಸಾಕು ನಾಯಿ ಮೂರು ವರ್ಷದ ಡಾಬರ್ ಮೆನ್ ನ ರಕ್ತ ಮ್ಯಾಚ್ ಆಗಿದೆ.

ಬಳಿಕ ಆ ಶ್ವಾನದ 300 ml ರಕ್ತವನ್ನು ಪರೀಕ್ಷಿಸಿ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬ್ರಡಾರ್ ಗೆ ನೀಡಲಾಗಿದೆ. ಇದರಿಂದ ನಾಯಿ ಚೇತರಿಸಿಕೊಂಡಿದೆ. ಈ ಮೂಲಕ ಪ್ರಾಣಿಯೊಂದು ಇನ್ನೊಂದು ಪ್ರಾಣಿಗೆ ರಕ್ತದಾನ ಮಾಡಿರುವ  ಅಪರೂಪದ ಕಾರ್ಯಕ್ಕೆ ಇಲ್ಲಿನ ಪಶು ಚಿಕಿತ್ಸಾಲಯ ಸಾಕ್ಷಿಯಾಗಿದೆ. ಅಲ್ಲದೇ ಪ್ರಾಣಿಗಳೇ ಗುಣದಲ್ಲಿ ಮೇಲು ಅನ್ನೋ ಮಾತಿಗೆ ಅರ್ಥ ಬಂದಂತಾಗಿದೆ. “

- Advertisement -

Latest News

error: Content is protected !!