Wednesday, June 3, 2026
Homeಕರಾವಳಿಕಡಬದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ; ಮೃತ ರಮೇಶ್ ರೈ ಸಮಾಧಿ ಬಳಿ ರೋಧಿಸುತ್ತಿದೆ...

ಕಡಬದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ; ಮೃತ ರಮೇಶ್ ರೈ ಸಮಾಧಿ ಬಳಿ ರೋಧಿಸುತ್ತಿದೆ ನಾಯಿ

- Advertisement -
- Advertisement -

ಕಡಬ: ಇಲ್ಲಿನ  ಮರ್ದಾಳ ಸಮೀಪ ಯುವತಿಯನ್ನು ರಕ್ಷಿಸಲು ಹೋಗಿ ತಾನೂ ಕಾಡಾನೆ ದಾಳಿಗೆ ಬಲಿಯಾದ ರಮೇಶ್ ರೈ ಪರೋಪಕಾರಿ. ತನ್ನವರು ಯಾರೂ ಇಲ್ಲದ ರಮೇಶ್ ರೈ ಅವರದ್ದು ಏಕಾಂಗಿ ಬದುಕು. ಬಲಿಯಾದ . ಸಾಮಾಜಿಕ ಕಾರ್ಯಕರ್ತನಾಗಿ ಗುರತಿಸಿಕೊಂಡಿದ್ದ ಅವರಿಗೆ ಪ್ರಾಣಿಗಳ ಮೇಲೆ ಅತೀವ ಪ್ರೀತಿ. ಇದೀಗ ಅವರ ಸಾವಿನ ಬಳಿಕ ಅದು ಸಾಬೀತಾಗಿದೆ.

ರಮೇಶ್ ರೈ ವಯಸ್ಸು ಐವತ್ತೆಂಟಾದರು ಮದುವೆಯಾಗಿರಲಿಲ್ಲ. ಅಪ್ಪ ಅಮ್ಮ ಅಕ್ಕ ತಂಗಿ ತಮ್ಮ ಅಣ್ಣ ಯಾರೂ ಇಲ್ಲ.  ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು.ನಾಯಿ ಅಂದ್ರೆ ಅವರಿಗೆ ತುಂಬಾನೇ ಇಷ್ಟ. ಅದಕ್ಕೆ ಸಾಕ್ಷಿ ಎಂಬಂತೆ ಅವರ ಸಮಾಧಿ ಬಳಿ  ನಾಯಿಯೊಂದು  ಕೆಲ ಹೊತ್ತು ರೋಧಿಸಿತ್ತಿರುವುದು ಕಂಡು ಬಂದಿದೆ. ಸಮಾಧಿ ಸುತ್ತಮುತ್ತ ಒಡಾಡುತ್ತಿದ್ದ ನಾಯಿ ಮಾತ್ರ ಸ್ಥಳೀಯರದ್ದು ಎನ್ನಲಾಗಿದ್ದು, ರಮೇಶ್ ರೈ ಅಗಲಿಕೆ ಅದು ರೋಧಿಸುತ್ತಿರೋದು ಮನ ಕಲಕುವಂತಿತ್ತು.

- Advertisement -

Latest News

error: Content is protected !!