Saturday, May 4, 2024
Homeತಾಜಾ ಸುದ್ದಿವ್ಯಕ್ತಿಯೊಬ್ಬರ ಕಿಡ್ನಿಯಲ್ಲಿತ್ತು ಬರೋಬ್ಬರಿ 206 ಕಲ್ಲುಗಳು:  1 ಗಂಟೆಯ ಶಸ್ತ್ರಚಿಕಿತ್ಸೆಯ ಮೂಲಕ ಎಲ್ಲವನ್ನೂ ಹೊರ ತೆಗೆದ...

ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿತ್ತು ಬರೋಬ್ಬರಿ 206 ಕಲ್ಲುಗಳು:  1 ಗಂಟೆಯ ಶಸ್ತ್ರಚಿಕಿತ್ಸೆಯ ಮೂಲಕ ಎಲ್ಲವನ್ನೂ ಹೊರ ತೆಗೆದ ವೈದ್ಯರು

spot_img
- Advertisement -
- Advertisement -

ಹೈದರಾಬಾದ್: ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ ಬರೋಬ್ಬರಿ 206 ಕಲ್ಲುಗಳನ್ನು 1 ಗಂಟೆಯ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ. ಹೈದರಾಬಾದ್‌ ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಕೀಹೋಲ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಕಲ್ಲುಗಳನ್ನು ತೆಗೆದಿದ್ದಾರೆ.

ನಲ್ಗೊಂಡ ನಿವಾಸಿ 56 ವರ್ಷದ ವೀರಮಲ್ಲ ರಾಮಲಕ್ಷ್ಮಯ್ಯ ಅವರು ಆರು ತಿಂಗಳಿಂದ ನಿರಂತರ ಸೊಂಟ ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಅವರು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ನೋವಿನಿಂದ ನರಳುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಸ್ಕ್ಯಾನ್ ನಡೆಸಿದಾಗ ಕಲ್ಲುಗಳಿರುವುದು ಗೊತ್ತಾಗಿದೆ.

ಚಿಕಿತ್ಸೆಯ ಕುರಿತು ಪ್ರತಿಕ್ರಿಯಿಸಿದ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್, ಕೆಲವು ಆರಂಭಿಕ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ ಗಳು ಎಡಭಾಗದಲ್ಲಿ ಮೂತ್ರಪಿಂಡದ ಕಲ್ಲುಗಳು ಇರುವುದನ್ನು ಬಹಿರಂಗಪಡಿಸಿದವು. ರೋಗಿಗೆ ಸಲಹೆ ನೀಡಿ ಒಂದು ಗಂಟೆಯವರೆಗೆ ಕೀಹೋಲ್ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಲಾಯಿತು, ಈ ಸಮಯದಲ್ಲಿ ಎಲ್ಲಾ 206 ಕಲ್ಲುಗಳನ್ನು ತೆಗೆದುಹಾಕಲಾಯಿತು, ನಂತರ, ರೋಗಿಯು ಚೇತರಿಸಿಕೊಂಡಿದ್ದು, ಎರಡನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!