Saturday, June 27, 2026
Homeಪ್ರಮುಖ-ಸುದ್ದಿ100 ಕೊಲೆ ಮಾಡಿದ ವೈದ್ಯ, ಪ್ರತಿ ಬಾರಿ ಕೊಲೆ ಮಾಡಿ ಏನ್ ಮಾಡ್ತಿದ್ದ ಗೊತ್ತಾ?

100 ಕೊಲೆ ಮಾಡಿದ ವೈದ್ಯ, ಪ್ರತಿ ಬಾರಿ ಕೊಲೆ ಮಾಡಿ ಏನ್ ಮಾಡ್ತಿದ್ದ ಗೊತ್ತಾ?

- Advertisement -
- Advertisement -

ದೇವರ ಸ್ಥಾನದಲ್ಲಿರಬೇಕಿದ್ದ ವೈದ್ಯ ರಾಕ್ಷಸನಾಗಿ ಅನೇಕರ ಪ್ರಾಣ ತೆಗೆದ ದೇವೇಂದ್ರ ಶರ್ಮಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 50 ಕೊಲೆಗಳ ನಂತ್ರ ನಾನು ಎಣಿಕೆ ಮರೆತಿದ್ದೆ ಎಂದಿದ್ದ ದೇವೇಂದ್ರ ಈಗ ಕೊಲೆ ಬಗ್ಗೆ ಮಾಹಿತಿ ನೀಡಿದ್ದಾನೆ.100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿರುವ ದೇವೇಂದ್ರ ಯುಪಿ ಕಾಲುವೆಯಲ್ಲಿದ್ದ ಮೊಸಳೆಗೆ ಆಹಾರವಾಗಿ ನೀಡಿದ್ದೇನೆ ಎಂದಿದ್ದಾನೆ.

ದೇವೇಂದ್ರ ಶರ್ಮಾ ಆಯುರ್ವೇದ ಪದವಿ ಮುಗಿಸಿದ ನಂತ್ರ ಕ್ಲಿನಿಕ್ ಶುರು ಮಾಡಿದ್ದ. ಇದ್ರ ಜೊತೆಗೆ ಗ್ಯಾಸ್ ಏಜೆನ್ಸಿಗೆ ಹಣ ಹಾಕಿದ್ದ. ಗ್ಯಾಸ್ ಏಜೆನ್ಸಿ ನಷ್ಟದಲ್ಲಿ ಮುಚ್ಚಿದ ನಂತ್ರ ನಕಲಿ ಗ್ಯಾಸ್ ಏಜೆನ್ಸಿ ಶುರು ಮಾಡಿದ್ದ. ಗ್ಯಾಂಗ್ ಕಟ್ಟಿಕೊಂಡಿದ್ದ ದೇವೇಂದ್ರ ಗ್ಯಾಸ್ ತೆಗೆದುಕೊಂಡು ಹೋಗ್ತಿದ್ದ ವಾಹನವನ್ನು ತಡೆದು ಚಾಲಕನನ್ನು ಹತ್ಯೆ ಮಾಡಿ ಸಿಲಿಂಡರ್ ವಶಕ್ಕೆ ಪಡೆಯುತ್ತಿದ್ದರು. ಇಷ್ಟೇ ಅಲ್ಲ ಮೂತ್ರಪಿಂಡ ಕಸಿ ಅವ್ಯವಹಾರದಲ್ಲಿ ತೊಡಗಿದ್ದ ದೇವೇಂದ್ರ ಅಲ್ಲೂ ಕೊಲೆ ಮಾಡಿದ್ದಾನೆ.

ಕ್ಯಾಬ್ ಚಾಲಕರನ್ನು ಹಿಡಿದು ಹತ್ಯೆ ಮಾಡ್ತಿದ್ದ ದೇವೇಂದ್ರ ಕ್ಯಾಬ್ ಲೂಟಿ ಮಾಡ್ತಿದ್ದ. ಈ ಎಲ್ಲ ಹೆಣಗಳನ್ನು ಹೆಚ್ಚು ಮೊಸಳೆಯಿರುವ ಕಾಲುವೆಗೆ ಎಸೆಯುತ್ತಿದ್ದ. ಕೆಲ ವರ್ಷಗಳಿಂದ ಜೈಲಿನಲ್ಲಿದ್ದ ದೇವೇಂದ್ರನಿಗೆ 20 ದಿನಗಳ ಬೇಲ್ ಸಿಕ್ಕಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ದೇವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!