Friday, June 5, 2026
Homeತಾಜಾ ಸುದ್ದಿಯೂ ಟರ್ನ್ ಹೊಡೆದ ಡಿ‌ ಕೆ ರವಿ‌ ತಾಯಿ... ...

ಯೂ ಟರ್ನ್ ಹೊಡೆದ ಡಿ‌ ಕೆ ರವಿ‌ ತಾಯಿ… ಸೊಸೆ ಕುಸುಮಾ ಪರ ಮತ ಯಾಚಿಸಿದ ಅತ್ತೆ

- Advertisement -
- Advertisement -

ತುಮಕೂರು: ಕೆಲವುದಿನಗಲ ಹಿಂದೆ ಉಪ ಚುನಾವಣೆಯಲ್ಲಿ ಡಿ.ಕೆ.ರವಿ ಫೋಟೊ ಬಳಸಿದರೆ ಬೆಂಕಿ ಹಚ್ಚುತ್ತೇನೆ ಎಂದು ಸೊಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಗೌರಮ್ಮ ತಮ್ಮ ನಿಲುವನ್ನು ಬದಲಿಸಿ ಕೊಂಡಿದ್ದಾರೆ. ‘ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಮತದಾರರು ನನ್ನ ಸೊಸೆ ಕುಸುಮಾ ಅವರಿಗೆ ಮತ ನೀಡಬೇಕು’ ಎಂದು ಕುಸುಮಾ ಅವರ ಅತ್ತೆ ಹಾಗೂ ಡಿ.ಕೆ.ರವಿ ಅವರ ತಾಯಿ ಗೌರಮ್ಮ ಮನವಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಹೊಟ್ಟೆಯ ಉರಿಯ ಕಾರಣಕ್ಕೆ ಈ ಹಿಂದೆ ಏನೇನೊ ಮಾತನಾಡಿದ್ದೆ.ಈಗ ಸಂಕಟವಾಗುತ್ತಿದೆ. ಆದರೆ ಆಕೆ ಕಣ್ಣೀರು ಹಾಕುವುದನ್ನು ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳಂತೆ ಅವಳ ಜತೆ ನಾಲ್ಕೈದು ವರ್ಷ ಬದುಕಿದ್ದೇನೆ. ದೇವರ ದಯೆಯಿಂದ ಆಕೆ ಗೆಲ್ಲಬೇಕು’ ಎಂದು ಕೋರಿದ್ದಾರೆ. ಕುಸುಮಾ ಅವರು ರಾಜಕೀಯ ಬದುಕನ್ನು ಕಟ್ಟಿಕೊಳ್ಳುವ ಹಿನ್ನೆಲೆಯಲ್ಲಿ ಅವರ ಅತ್ತೆಯ ಈ ಮಾತುಗಳು ಮಹತ್ವದ್ದು ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!