Thursday, June 4, 2026
Homeಕರಾವಳಿಉಡುಪಿದ.ಕ ಜಿಲ್ಲೆಯಲ್ಲಿಂದು 166 ಕೊರೊನಾ ಕೇಸುಗಳು ಪತ್ತೆ, ಉಡುಪಿಯಲ್ಲಿ ಭರ್ಜರಿ ರನ್ ಕಲೆ ಹಾಕಿದ ಕೋವಿಡ್

ದ.ಕ ಜಿಲ್ಲೆಯಲ್ಲಿಂದು 166 ಕೊರೊನಾ ಕೇಸುಗಳು ಪತ್ತೆ, ಉಡುಪಿಯಲ್ಲಿ ಭರ್ಜರಿ ರನ್ ಕಲೆ ಹಾಕಿದ ಕೋವಿಡ್

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು 166 ಹೊಸ ಕೊರೊನಾ ಕೇಸುಗಳು ಪತ್ತೆಯಾಗಿವೆ. ಅಲ್ಲದೇ 7 ಮಂದಿ ಇಂದು ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 6,876ಕ್ಕೆ ಏರಿಕೆಯಾಗಿದ್ದು, ಸದ್ಯ ದ.ಕ ಜಿಲ್ಲೆಯಲ್ಲಿ 3373 ಸಕ್ರಿಯ ಪ್ರಕರಣಗಳಿವೆ. 3,295 ಜನ ಗುಣಮುಖರಾಗಿದ್ದಾರೆ. ಇದುವೆರಗೂ 206 ಮಂದಿ ಕೋವಿಡ್ ನಿಂದಾಗಿ ಮರಣವನ್ನಪ್ಪಿದ್ದಾರೆ. ಇಂದು 188 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಅತ್ತ ಉಡುಪಿಯಲ್ಲಿ ಇಂದು ಕೊರೊನಾ ಭರ್ಜರಿ ರನ್ ಬಾರಿಸಿದೆ. ಬರೋಬ್ಬರಿ 246 ಪ್ರಕರಣಗಳು ಇಂದು ಪತ್ತೆಯಾಗಿವೆ. 5 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,605ಕ್ಕೆ ಏರಿಕೆಯಾಗಿದ್ದು, 2,389 ಸಕ್ರಿಯ ಪ್ರಕರಣಗಳಿವೆ. 3161 ಮಂದಿ ಗುಣಮುಖರಾಗಿದ್ದಾರೆ. ಇದುವೆರಗೂ 55 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 103 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!