Friday, June 26, 2026
Homeಕರಾವಳಿದಕ್ಷಿಣಕನ್ನಡ ಹಾಗೂ ಉಡುಪಿಯ ಕೋವಿಡ್ ಅಪ್ಡೇಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ..

ದಕ್ಷಿಣಕನ್ನಡ ಹಾಗೂ ಉಡುಪಿಯ ಕೋವಿಡ್ ಅಪ್ಡೇಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ..

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 194 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7,070ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಕೊರೊನಾಗೆ ಜಿಲ್ಲೆಯಲ್ಲಿ 6 ಮಂದಿ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 3,378 ಸಕ್ರಿಯ ಪ್ರಕರಣಗಳಿದ್ದು, 3,478 ಮಂದಿ ಗುಣಮುಖರಾಗಿದ್ದಾರೆ. ಇಂದು 183 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೋವಿಡ್ ಗೆ 212 ಮಂದಿ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮೆರೆದಿದ್ದು, ಇಂದು 314 ಮಂದಿಗೆ ಪಾಸಿಟಿವ್‌ ಧೃಡವಾಗಿದೆ, ಇದುವರೆಗೆ ಒಟ್ಟು 60 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಒಂದೇ ದಿನದ ಗಂಟಲುದ್ರವ ಮಾದರಿ ಸಂಗ್ರಹ 2,000 ದಾಟಿದ್ದು, ಇಂದು 314 ಮಂದಿಗೆ ಪಾಸಿಟಿವ್‌ ಧೃಡವಾಗಿದೆ. ಶನಿವಾರ ಆಸ್ಪತ್ರೆಯಿಂದ ಒಟ್ಟು 89 ಮಂದಿ ಬಿಡುಗಡೆಗೊಂಡಿದ್ದಾರೆ. 1,287 ಮಂದಿ ಆಸ್ಪತ್ರೆಗಳಲ್ಲಿ, 1,225 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೋವಿಡ್ ನಿಂದ 5 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,598 ಸಕ್ರಿಯ ಪ್ರಕರಣಗಳಿದ್ದು, 3,260 ಮಂದಿ ಗುಣಮುಖರಾಗಿದ್ದಾರೆ. 60 ಮಂದಿ ಇದುವರೆಗೂ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!