Thursday, June 4, 2026
Homeಕರಾವಳಿದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಇಂದಿನ ಕೊರೊನಾ ಮಾಹಿತಿ ಇಲ್ಲಿದೆ ನೋಡಿ...

ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಇಂದಿನ ಕೊರೊನಾ ಮಾಹಿತಿ ಇಲ್ಲಿದೆ ನೋಡಿ…

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 316 ಕೋವಿಡ್ ಕೇಸುಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 13,795ಕ್ಕೇರಿದೆ. ಇನ್ನು ಇಂದು ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2705 ಸಕ್ರಿಯ ಪ್ರಕರಣಗಳಿದ್ದು, 10,706 ಮಂದಿ ಗುಣಮುಖರಾಗಿದ್ದಾರೆ. ಇಂದು 208 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 382 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಉಡುಪಿಯಲ್ಲಿ 228 ಹೊಸ ಕೇಸುಗಳು ಇಂದು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 12,156ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 2,254 ಸಕ್ರಿಯ ಪ್ರಕರಣಗಳಿದ್ದು, 9,797 ಮಂದಿ ಗುಣಮುಖರಾಗಿದ್ದಾರೆ. ಇಂದು 328 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾ ನಾಲ್ವರು ಬಲಿಯಾಗೋದರೊಂದಿಗೆ ಇದುವರೆಗೂ ಬಲಿಯಾದವರ ಸಂಖ್ಯೆ 105ಕ್ಕೇರಿದೆ.

- Advertisement -

Latest News

error: Content is protected !!