Monday, July 7, 2025
Homeತಾಜಾ ಸುದ್ದಿಜೂನ್ 24 ರಿಂದ ‘ಅಗ್ನಿವೀರ್’ ನೊಂದಣಿ ಪ್ರಕ್ರಿಯೆ ಶುರು; ಇಲ್ಲಿ ಬೆಂಕಿ ಹಚ್ಚುವವರಿಗೆ ಜಾಗವಿಲ್ಲ ಎಂದ...

ಜೂನ್ 24 ರಿಂದ ‘ಅಗ್ನಿವೀರ್’ ನೊಂದಣಿ ಪ್ರಕ್ರಿಯೆ ಶುರು; ಇಲ್ಲಿ ಬೆಂಕಿ ಹಚ್ಚುವವರಿಗೆ ಜಾಗವಿಲ್ಲ ಎಂದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ

spot_img
- Advertisement -
- Advertisement -

ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ‘ಅಗ್ನಿಪಥ’ ಯೋಜನೆಯ ವಿರುದ್ಧ ಭಾರಿ ಪ್ರತಿಭಟನೆಗಳ ನಡುವೆಯೂ ಭಾನುವಾರದಂದು ಮೂರು ಸೇನಾ ಮುಖ್ಯಸ್ಥರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿ ಕೆಲವೊಂದು ನಿರ್ಣಯಕಗಳನ್ನು ತೆಗೆದುಕೊಂಡಿದ್ದಾರೆ.

ಸಭೆಯಲ್ಲಿ ನಿರ್ಣಯವಾದ ಯೋಜನೆಯ ಕುರಿತು ಸೇನಾ ನಾಯಕರು ಸುದ್ದಿಗೋಷ್ಠಿಯಲ್ಲಿ ವಿವರಗಳು ಹೀಗಿವೆ:
ಅಗ್ನಿಪಥ್ ಯೋಜನೆ ರೀತಿಯ ಸುಧಾರಣೆ ಬಹಳ ಕಾಲದಿಂದಲೂ ಬಾಕಿ ಇತ್ತು. ಈ ಸುಧಾರಣೆಯೊಂದಿಗೆ ನಾವು ತಾರುಣ್ಯ ಮತ್ತು ಅನುಭವವನ್ನು ತರಲು ಬಯಸುತ್ತಿದ್ದು ಇಂದು, ಹೆಚ್ಚಿನ ಸಂಖ್ಯೆಯ ಜವಾನರು ತಮ್ಮ 30 ರ ಹರೆಯದಲ್ಲಿದ್ದಾರೆ ಮತ್ತು ಅಧಿಕಾರಿಗಳು ಹಿಂದಿನದಕ್ಕಿಂತ ಬಹಳ ತಡವಾಗಿ ಆದೇಶವನ್ನು ಪಡೆಯುತ್ತಿದ್ದಾರೆ ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ ಎಂದು ತಿಳಿಸಿದರು.

ಭಾರತೀಯ ಸೇನೆಯು ಶಿಸ್ತಿನ ಅಡಿಪಾಯ. ಇಲ್ಲಿ ಬೆಂಕಿ ಹಚ್ಚುವಿಕೆ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲವೆಂದು ಪ್ರಮಾಣಪತ್ರವನ್ನು ನೀಡುತ್ತಾರೆ. ಪೊಲೀಸ್ ಪರಿಶೀಲನೆಯು 100% ಆಗಿದೆ, ಅದು ಇಲ್ಲದೆ ಯಾರೂ ಸೇರಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.

ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ಸೈನಿಕರಿಗೆ ಅನ್ವಯವಾಗುವ ಸಿಯಾಚಿನ್ ಮತ್ತು ಇತರ ಪ್ರದೇಶಗಳಲ್ಲಿ ‘ಅಗ್ನಿವೀರ್‌ಗಳು ಒಂದೇ ರೀತಿಯ ಭತ್ಯೆಯನ್ನು ಪಡೆಯುತ್ತಾರೆ. ಸೇವಾ ಪರಿಸ್ಥಿತಿಗಳಲ್ಲಿ ಅವರ ವಿರುದ್ಧ ಯಾವುದೇ ತಾರತಮ್ಯವಿಲ್ಲ. ‘ಅಗ್ನಿವೀರರು’ ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದರೆ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದರು.

ಇಲಾಖೆಗಳು ಹಾಗೂ ವಿವಿಧ ಸಚಿವಾಲಯಗಳು ಘೋಷಿಸಿದ ‘ಅಗ್ನಿವೀರ’ ಮೀಸಲಾತಿಯ ಕುರಿತು ಘೋಷಣೆಗಳು ಪೂರ್ವ ಯೋಜಿತವಾಗಿದ್ದು, ಅಗ್ನಿಪಥ್ ಯೋಜನೆ ಘೋಷಣೆ ಮಾಡಿದ ನಂತರ ಸಂಭವಿಸಿದ ಹಿಂಸಾತ್ಮಕ ಪ್ರತಿಭಟನೆಗಳ ಪ್ರತಿಕ್ರಿಯೆಯಾಗಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ.

ಯಾವುದೇ ಎಫ್‌ಐಆರ್ ದಾಖಲಿಸಿದರೆ, ಅವರು ಸೇನೆಗೆ ಸೇರಲು ಅರ್ಹರಾಗಿರುವುದಿಲ್ಲ. ದಾಖಲಾತಿ ಫಾರ್ಮ್‌ನ ಭಾಗವಾಗಿ ಅವರು ಬೆಂಕಿ ಹಚ್ಚಿದ ಭಾಗವಾಗಿಲ್ಲ ಎಂದು ಬರೆಯಲು ಆಕಾಂಕ್ಷಿಗಳನ್ನು ಕೇಳಲಾಗುತ್ತದೆ, ಅವರ ಪೊಲೀಸ್ ಪರಿಶೀಲನೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮೂರು ಸೇವೆಗಳಿಂದ ಪ್ರತಿ ವರ್ಷ ಸುಮಾರು 17,600 ಜನರು ಅಕಾಲಿಕ ನಿವೃತ್ತಿ ಪಡೆಯುತ್ತಿದ್ದಾರೆ. ನಿವೃತ್ತಿಯ ನಂತರ ಅವರು ಏನು ಮಾಡುತ್ತಾರೆ ಎಂದು ಯಾರೂ ಕೇಳಲು ಪ್ರಯತ್ನಿಸಲಿಲ್ಲ ಎಂದು ತಿಳಿಸಿದ್ದಾರೆ.

ಮೊದಲ ನೌಕಾಪಡೆ ‘ಅಗ್ನಿವೀರ್ಸ್’ ಒಡಿಶಾದ ಐಎನ್ ಯಸ್ ಚಿಲ್ಕಾ ತರಬೇತಿ ಸಂಸ್ಥೆಯಲ್ಲಿ ಈ ವರ್ಷದ ನವೆಂಬರ್ 21 ರಿಂದ, ಪ್ರಾರಂಭವಾಗುತ್ತದೆ. ಯುವಕ ಮತ್ತು ಯುವತಿಗರಿಗೆ ಅಗ್ನಿವೀರ್‌ಗಳಿಗೆ ಸೇರಲು ಅವಕಾಶವಿದೆ ಎಂದು ಅಗ್ನಿಪರ್ ಯೋಜನೆಯ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿದ್ದಾರೆ.

ಪ್ರಸ್ತುತ ಭಾರತೀಯ ನೌಕಾಪಡೆಯು ವಿವಿಧ ಹಡಗುಗಳಲ್ಲಿ ನೌಕಾಯಾನ ಮಾಡುತ್ತಿರುವ 30 ಮಹಿಳಾ ಅಧಿಕಾರಿಗಳನ್ನು ಹೊಂದಿದ್ದು, ಅಗ್ನಿಪಥ್ ಯೋಜನೆಯಡಿ ಮಹಿಳೆಯರನ್ನೂ ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಅವರನ್ನು ಯುದ್ಧನೌಕೆಗಳಲ್ಲೂ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಡಿಸೆಂಬರ್ ಮೊದಲ ವಾರದ ವೇಳೆಗೆ, ಮೊದಲ ಬ್ಯಾಚ್ ನಲ್ಲಿ 25,000 ‘ಅಗ್ನಿವೀರ್’ಗಳನ್ನು ಪಡೆಯುತ್ತೇವೆ ಮತ್ತು ಎರಡನೇ ಬ್ಯಾಚ್ ಅನ್ನು ಫೆಬ್ರವರಿ 2023ರ ಸುಮಾರಿಗೆ ಸೇರ್ಪಡೆಗೊಳಿಸಲಾಗುವುದು. ಆಗ ಸಂಖ್ಯೆ 40,000 ಆಗಲಿದೆ ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನಪ್ಪ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ‘ಅಗ್ನಿವೀರ್ಸ್’ ಸಂಖ್ಯೆಯು 1.25 ಲಕ್ಷಕ್ಕೆ ಏರಲಿದೆ ಮತ್ತು ಪ್ರಸ್ತುತ ಅಂಕಿ ಅಂಶ 46,000 ನಲ್ಲಿ ಉಳಿಯುವುದಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ.

ಜೂನ್ 24 ರಿಂದ ಅಗ್ನಿವೀ‌ರ್ ಬ್ಯಾಚ್ ಸಂಖ್ಯೆ 1 ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಜುಲೈ 24 ರಿಂದ ಹಂತ 1 ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಮೊದಲ ಬ್ಯಾಚ್ ಡಿಸೆಂಬರ್ ವೇಳೆಗೆ ದಾಖಲಾಗಲಿದೆ ಮತ್ತು ಡಿಸೆಂಬರ್ 30 ರೊಳಗೆ ತರಬೇತಿ ಪ್ರಾರಂಭವಾಗುತ್ತದೆ ಎಂದು ಏರ್ ಮಾರ್ಷಲ್ ಎಸ್ ಕೆ ಝಾ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!