- Advertisement -
- Advertisement -
ಕಾರ್ಕಳ: ಇಲ್ಲಿನ ಕಾಂತಾವರ ಗ್ರಾಮದ ಬಾರಾಡಿ ರಸ್ತೆಯಲ್ಲಿ ನಿನ್ನೆ ಸಂಜೆ 7.15ರ ಸಮಯದಲ್ಲಿ ಕಿಡಿಗೇಡಿಗಳು ಸುಮಾರು 15 ಮಂಗಗಳಿಗೆ ವಿಷ ಪ್ರಾಶನ ಮಾಡಿ ಬಾರಾಡಿ ರಸ್ತೆಯಲ್ಲಿ ಒಮಿನಿ ಕಾರಿನಲ್ಲಿ ಬಂದು ಎಸೆದು ಹೋಗಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯ ಬಾರಾಡಿ ಫ್ರೆಂಡ್ಸ್ ನ ಸದಸ್ಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
- Advertisement -