- Advertisement -
![]()
- Advertisement -
ಉಳ್ಳಾಲ : ಪ್ರಸಿದ್ಧ ಕೊರಿಯೋಗ್ರಾಫರ್ ಎಂದು ಖ್ಯಾತಿ ಪಡೆದಿದ್ದ ಮಂಗಳೂರು ಹೊರವಲಯದ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ರೋಷನ್ ಡಿಸೋಜಾ ( 48 ) ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ .
ತೊಂಭತ್ತರ ದಶಕದಲ್ಲೇ ಕರಾವಳಿಯಲ್ಲಿ ಅವರು ಟಾಪ್ ಈಗಲೈಸ್ ನೃತ್ಯ ತಂಡ ಕಟ್ಟಿ ಕರ್ನಾಟಕ ಮಾತ್ರವಲ್ಲದೆ ಮುಂಬಯಿ , ಗೋವಾದಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಸಿದ್ಧಿಯನ್ನು ಪಡೆದಿದ್ದರು .
ರೋಷನ್ ಡಿಸೋಜಾ ಅವರು ಕರಾವಳಿಯ ಆರಾಧ್ಯ ಸ್ವಾಮಿ ಕೊರಗಜ್ಜನ ಅಪ್ರತಿಮ ಭಕ್ತರಾಗಿದ್ದರು . ಮೃತರು ಅವಿವಾಹಿತರಾಗಿದ್ದು ತಾಯಿ , ಇಬ್ಬರು ಸಹೋದರರನ್ನು ಅಗಲಿದ್ದಾರೆ .
- Advertisement -


