Thursday, May 16, 2024
Homeಕರಾವಳಿಮೂಲ್ಕಿ: ಭಾರಿ ಮಳೆಗೆ ಉಕ್ಕಿಹರಿದ ನಂದಿನಿ ನದಿ; ಜಲಾವೃತಗೊಂಡ ರಸ್ತೆಗಳು

ಮೂಲ್ಕಿ: ಭಾರಿ ಮಳೆಗೆ ಉಕ್ಕಿಹರಿದ ನಂದಿನಿ ನದಿ; ಜಲಾವೃತಗೊಂಡ ರಸ್ತೆಗಳು

spot_img
- Advertisement -
- Advertisement -

ಮೂಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ ಪರಿಸರದಲ್ಲಿ ಸುರಿದ ಭಾರಿ ಮಳೆಗೆ ನಂದಿನಿ ನದಿ ಉಕ್ಕಿಹರಿದು ಪಕ್ಷಿಕೆರೆ ಸಮೀಪದ ನದಿ ತೀರದ ಪ್ರದೇಶಗಳಾದ ಕೆಮ್ರಾಲ್, ಪಂಜ, ಬೈಲಗುತ್ತು ಪಂಜ ಬಾಕಿ ಮಾರ್ ಪ್ರದೇಶ 42 ಮನೆಗಳು, 4 ದೈವಸ್ಥಾನ, 5 ಬ್ರಹ್ಮಸ್ಥಾನ ಜಲಾವೃತಗೊಂಡಿದೆ.


ರಾತ್ರಿ ಏಕಾಏಕಿ ಸುರಿದ ಭಾರಿ ಮಳೆಗೆ ಎಕರೆಗಟ್ಟಲೆ ಕೃಷಿ ಹಾನಿ ಸಂಭವಿಸಿದ್ದು, 12 ಕೃಷಿ ಪಂಪ್‌ಶೆಡ್ ಕೂಡಮುಳುಗಡೆಯಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಕೃಷಿಕ ಪಂಜ ಮಜಲ ಗುತ್ತು ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.ಸಮೀಪದ ಉಲ್ಯ ಕುದುರು ಪ್ರದೇಶದಲ್ಲಿ 32 ಮನೆಗಳು ಜಲಾವೃತವಾಗಿದ್ದು ಸ್ಥಳೀಯರ ಸಹಕಾರದಿಂದ ದನ ಕರುಗಳನ್ನು ಹಾಗೂ 3 ಮನೆಯವರನ್ನು ಸ್ಥಳಾಂತರಗೊಳಿಸಲಾಗಿದ್ದು ಸಂಪರ್ಕ ರಸ್ತೆ ನೀರಿನಲ್ಲಿ ಮುಳುಗಿದೆ ಹಾಗೂ ಕೃಷಿ ನಾಶ ಸಂಭವಿಸಿದೆ ಎಂದು ಉಲ್ಯಸುಂದರ ಪೂಜಾರಿ ತಿಳಿಸಿದ್ದಾರೆ.


ಕಟೀಲಿನಲ್ಲಿ ನಂದಿನಿ ನದಿ ಉಕ್ಕಿ ಹರಿದಿದ್ದು ಬಳಿ ಕಿರು ಸೇತುವೆ ಕಟ್ಟೆ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಕಟೀಲಿಗೆ ಸಂಪರ್ಕ ಕಲ್ಪಿಸುವ ಜಲಕದ ಕಟ್ಟೆ ಬಳಿ ಬಡಗ ಎಕ್ಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಕ್ಕುಂಡೇಲು, ಮಚ್ಚಾರು ಪ್ರದೇಶದ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ಕಿರು ಸೇತುವೆ ಅವಲಂಬಿಸಿದ್ದು, ನೆರೆ ನೀರಿನಿಂದಾಗಿ ಕಂಗಾಲಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.


ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಳೂರು ಬಳಿ ತಡೆಗೋಡೆಯಾಗಿ ನಿರ್ಮಿಸಿದ ಸ್ಲಾಬ್ ಪಕ್ಕದ ಮನೆ ಮೇಲೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.

- Advertisement -
spot_img

Latest News

error: Content is protected !!