Thursday, June 25, 2026
Homeಕರಾವಳಿದಲಿತರ ಶಿಕ್ಷಣ ಮತ್ತು ಭೂ ಹಕ್ಕೊತ್ತಾಯ ಸಮಿತಿಯಿಂದ ಡಿ. 23ರಂದು ಹಕ್ಕೋತ್ತಾಯ ಜಾಥಾ

ದಲಿತರ ಶಿಕ್ಷಣ ಮತ್ತು ಭೂ ಹಕ್ಕೊತ್ತಾಯ ಸಮಿತಿಯಿಂದ ಡಿ. 23ರಂದು ಹಕ್ಕೋತ್ತಾಯ ಜಾಥಾ

- Advertisement -
- Advertisement -

ಮಂಗಳೂರು: ದಲಿತರ ಶಿಕ್ಷಣ ಮತ್ತು ಭೂ ಹಕ್ಕೊತ್ತಾಯ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಡಿ. 23ರಂದು ದಲಿತರಿಂದ ಬೆಳ್ತಂಗಡಿಯಲ್ಲಿ ʻನಮ್ಮ ಭೂಮಿ ನಮ್ಮ ಹಕ್ಕುʼ ಘೋಷಣೆಯೊಂದಿಗೆ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ.

ಸಮಿತಿಯ ಸಂಚಾಲಕ ಎಂ.ಬಿ.ಕರಿಯ ಧರ್ಮಸ್ಥಳ ಅವರು ಶನಿವಾರದಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಈ ಬಗ್ಗೆ ಮಾತನಾಡಿ, “ಬೆಳಗ್ಗೆ 10 ಗಂಟೆಗೆ ಜಾಥಾ ಶುರುವಾಗಲಿದ್ದು, ಬೆಳ್ತಂಗಡಿ ಅಯ್ಯಪ್ಪ ಗುಡಿಯ ಬಳಿಯಿಂದ ಜಾಥಾ ನಡೆಯಲಿದೆ. ನಂತರದಲ್ಲಿ ಸಿವಿಸಿ ಹಾಲ್‌ನಲ್ಲಿ ಸಮಾವೇಶ ನಡೆಯಲಿದೆ. ಜಾಥಾದ ಮುಖ್ಯ ಉದ್ದೇಶ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿ ಕುಟುಂಬಕ್ಕೆ ಲಭ್ಯ ಇರುವ ಸರಕಾರಿ ಭೂಮಿಯಲ್ಲಿ ಕನಿಷ್ಟ ಒಂದು ಎಕರೆ ಭೂಮಿ ನೀಡಬೇಕು. ಭೂ ಅಭಿವೃದ್ಧಿಗೆ ಹೆಚ್ಚಿನ ಸೌಲಭ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋದಕ ಮತ್ತು ಬೋದಕೇತರ ಸಿಬ್ಬಂದಿ ಪೈಕಿ ಶೇ.20ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ನೇಮಕ ಮಾಡಬೇಕು. ದಲಿತರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎನ್ನುವುದಾಗಿದ್ದು, ಈ ಎಲ್ಲಾ ವಿಚಾರಗಳೊಂದಿಗೆ ಹಕ್ಕೊತ್ತಾಯ ಜಾಥಾ ಹಾಗೂ ಸಮಾವೇಶ ನಡೆಯಲಿದೆ ಎಂದರು.

ಸಹ ಸಂಚಾಲಕ ಸುಕೇಶ್ ಮಾಲಾಡಿ ಮಾತನಾಡಿ, ಉಜಿರೆಯ ಕಾಲೇಜಿಗೆ ಮತ್ತು ನಾಲ್ಕು ಹೈಸ್ಕೂಲ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನಿಯಮ ಪ್ರಕಾರ ಶೇ.20ರಷ್ಟು ಬೋದಕ ಮತ್ತು ಬೋದಕೇತರ ಸಿಬ್ಬಂದಿ ನೇಮಕ ಮಾಡಿಲ್ಲ. ಈ ಬಗ್ಗೆ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ದಲಿತರ 14 ಹಕ್ಕೊತ್ತಾಯಗಳ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ. ನರೇಂದ್ರ ನಾಯಕ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್, ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ ರಾಜಗೋಪಾಲ್, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ಕೋಲಾರ ಅಧ್ಯಕ್ಷ ಸಂದೇಶ್ ಕೆ.ಎಂ., ಚಲನಚಿತ್ರ ನಿರ್ದೇಶಕ ಹಾಗೂ ಸಾಮಾಜಿಕ ಹೋರಟಾಗರ ಟೈಗರ್ ನಾಗ್, ಪ್ರೊಕೃಷ್ಣಪ್ಪ ಸ್ವಾಭಿಮಾನ ಬಳಗದ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್, ಡಿಎಸ್‌ಎಸ್ ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕ ಆರ್.ರಮೇಶ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಲಿದ್ದಾರೆ.

- Advertisement -

Latest News

error: Content is protected !!