Friday, May 3, 2024
Homeಕರಾವಳಿಕರಾವಳಿಯ ದೈವಗಳ ಹೆಸರಲ್ಲಿ ಹಣ ಸುಲಿಗೆ; ತುಳುನಾಡ ದೈವಾರಾಧಕರಿಂದ ಎಚ್ಚರಿಕೆ

ಕರಾವಳಿಯ ದೈವಗಳ ಹೆಸರಲ್ಲಿ ಹಣ ಸುಲಿಗೆ; ತುಳುನಾಡ ದೈವಾರಾಧಕರಿಂದ ಎಚ್ಚರಿಕೆ

spot_img
- Advertisement -
- Advertisement -

ಮಂಗಳೂರು: ತುಳುನಾಡಿಗೆ ಸೀಮಿತವಾಗಿದ್ದ ದೈವರಾಧನೆ ಇದೀಗ ಬೇಕಾದಡೆ ಮಾಡಬಹುವುದು ಎಂಬಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕೊರಗಜ್ಜ, ಗುಳಿಗನ ದೈವಸ್ಥಾನಗಳು ತಲೆ ಎತ್ತಿವೆ. ಇಲ್ಲಿ ದೈವ ಆರಾಧನೆಗಳ ಹೆಸರಲ್ಲಿ ಜನರಿಂದ ಸುಲಿಗೆ ಮಾಡುತ್ತಿರೋದು ಬಯಲಾಗಿದೆ.

ಬೆಂಗಳೂರು, ಮೈಸೂರು ಭಾಗದಲ್ಲಿ ದೈವದ ಕಟ್ಟೆಗಳನ್ನು ಸ್ಥಾಪಿಸಿ ಗೂಗಲ್ ಪೇ ಮಾಡಿ, ಫೋನ್ ಪೇ ಮಾಡಿ ಎನ್ನುತ್ತಿದ್ದಾರೆ. ಇದು ಕರಾವಳಿಯ ದೈವಾರಾಧಕರನ್ನು ಕೆರಳಿಸಿದೆ. ಇಂತಹವರಿಗೆ ತುಳುನಾಡ ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.

ದುಡ್ಡು ಸಿಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿ ಹೋಗಿ ನೇಮ ಕಟ್ಟುವವರಿಗೆ, ತಾಸೆ ಬ್ಯಾಂಡ್ ಸೆಟ್‌ನವರಿಗೆ, ಮಧ್ಯಸ್ಥ, ಮುಕ್ಕಾಲ್ದಿ ಹಾಗೂ ಯಾರೆಲ್ಲ ಇಲ್ಲಿ ತೊಡಗಿಸಿಕೊಳ್ಳುತ್ತಾರೆಯೋ ಅವರೆಲ್ಲರಿಗೂ ಮುಂದೆ ನಮ್ಮ ಊರಿನ ಯಾವುದೇ ದೈವಸ್ಥಾನ, ಮನೆಗಳಲ್ಲಿ ನೇಮದ ಕೊಡಿಯಡಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ತುಳುನಾಡ ದೈವಾರಾಧಕರು ಎಚ್ಚರಿಕೆ ನೀಡಿದ ಫೋಟೋ ಒಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -
spot_img

Latest News

error: Content is protected !!