Friday, April 26, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ರಾಯರ ಅನುಗ್ರಹ ಸಿಗಲಿದೆ..?

ಗುರುವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಇಂದು ರಾಯರ ಅನುಗ್ರಹ ಸಿಗಲಿದೆ..?

spot_img
- Advertisement -
- Advertisement -

ಮೇಷ:
ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸ ಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವುದು.
ಶುಭ ಸಂಖ್ಯೆ: 7

ವೃಷಭ:
ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು.
ಶುಭ ಸಂಖ್ಯೆ: 1

ಮಿಥುನ:
ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವವು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ.
ಶುಭ ಸಂಖ್ಯೆ: 3

ಕರ್ಕ:
ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ.
ಶುಭ ಸಂಖ್ಯೆ: 9

ಸಿಂಹ:
ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು. ಶ್ರಮಿಕವರ್ಗಕ್ಕೆ ಉನ್ನತಿ ಇರುವುದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವುದು.
ಶುಭ ಸಂಖ್ಯೆ: 4

ಕನ್ಯಾ:
ಮಾನಸಮ್ಮಾನಗಳು ದೊರೆಯುವವು. ಕಂಕಣಬಲ ಕೂಡಿಬರುವುದು. ಮನೋಭಿಲಾಷೆಗಳು ಈಡೇರುವವು. ಆದರೆ ಉದ್ಯೋಗದಲ್ಲಿ ನಿರಾಸಕ್ತಿ ಇರುವುದು ಮತ್ತು ವ್ಯವಹಾರದಲ್ಲಿ ಅಸಮಾಧಾನ ಕಂಡುಬರುವುದು.
ಶುಭ ಸಂಖ್ಯೆ: 6

ತುಲಾ:
ಅಪೇಕ್ಷಿತ ಸ್ಥಾನಮಾನಗಳು ದೊರೆಯುವವು. ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಭಂಗವಿಲ್ಲ. ಆದಾಯಕ್ಕಿಂತ ಅಧಿಕ ಖರ್ಚು ಇರುವುದು.
ಶುಭ ಸಂಖ್ಯೆ: 2

ವೃಶ್ಚಿಕ:
ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವುದು. ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೇಯ ಉಂಟಾಗುವುದು. ಮಿತಿ ಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರುವದಿಲ್ಲ.
ಶುಭ ಸಂಖ್ಯೆ: 7

ಧನು:
ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು.
ಶುಭ ಸಂಖ್ಯೆ: 8

ಮಕರ:
ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು.
ಶುಭ ಸಂಖ್ಯೆ: 3

ಕುಂಭ:
ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.
ಶುಭ ಸಂಖ್ಯೆ: 4

ಮೀನ:
ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು, ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ.
ಶುಭ ಸಂಖ್ಯೆ: 1

- Advertisement -
spot_img

Latest News

error: Content is protected !!