Thursday, April 25, 2024
Homeತಾಜಾ ಸುದ್ದಿಜನವರಿಯಿಂದ ವಿದ್ಯುತ್ ದರದಲ್ಲಿ ಇಳಿಕೆ ಸಾಧ್ಯತೆ: ಬಳಕೆದಾರರ ಶುಲ್ಕ ಕಡಿತಕ್ಕೆ ಇಂಧನ ಇಲಾಖೆ ನಿರ್ಧಾರ

ಜನವರಿಯಿಂದ ವಿದ್ಯುತ್ ದರದಲ್ಲಿ ಇಳಿಕೆ ಸಾಧ್ಯತೆ: ಬಳಕೆದಾರರ ಶುಲ್ಕ ಕಡಿತಕ್ಕೆ ಇಂಧನ ಇಲಾಖೆ ನಿರ್ಧಾರ

spot_img
- Advertisement -
- Advertisement -

ಬೆಂಗಳೂರು: ಹೊಸ ವರ್ಷದಲ್ಲಿ ವಿದ್ಯುತ್ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಗ್ರಾಹಕರ ಮೇಲಿನ ಹೊರೆ ಇಳಿಕೆಗೆ ಇಂಧನ ಸಚಿವ ವಿ. ಸುನಿಲ್ ಕುಮಾರ್ ಸೂಚನೆ ನೀಡಿದ್ದು, ವಿದ್ಯುತ್ ದರ ಕಡಿತ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ಧಪಡಿಸಿದೆ‌.

ಬಳಕೆದಾರರ ಶುಲ್ಕ ಕಡಿಮೆ ಮಾಡಲು ಇಂಧನ ಇಲಾಖೆ ನಿರ್ಧಾರ ಮಾಡಿದ್ದು, ಗೃಹ ಬಳಕೆ ಸೇರಿದಂತೆ ಎಲ್ಲಾ ಬಗೆಯ ಗ್ರಾಹಕರಿಗೆ ಅನುಕೂಲವಾಗುವ ಸಾಧ್ಯತೆಯಿದೆ.

ಪ್ರತಿ ಯುನಿಟ್ ದರ 70 ಪೈಸೆಯಿಂದ 2 ರೂಪಾಯಿವರೆಗೂ ಶುಲ್ಕ ಇಳಿಕೆಯಾಗುವ ನಿರೀಕ್ಷೆಯಿದ್ದು, ಎಲ್ಲಾ ಎಸ್ಕಾಂಗಳಿಂದ ಕೆಇಆರ್ ಸಿಗೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಬಳಕೆದಾರರ ಶುಲ್ಕ ಕಡಿಮೆ ಮಾಡಿ ದರಪಟ್ಟಿ ಸಲ್ಲಿಸಲು ಇಂಧನ ಇಲಾಖೆ ನಿರ್ಧಾರ ಕೈಗೊಂಡಿದೆ.ಗೃಹ ಬಳಕೆ, ಎಚ್ ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್ ಟಿ ಗ್ರಾಹಕರಿಗೂ ಅನ್ವಯವಾಗಲಿದೆ.

ಇದರ ಜೊತೆಗೆ ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತುಸು ರಿಯಾಯಿತಿ ದೊರೆಯುವ ಸಾಧ್ಯತೆಯಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆ ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆದಿದೆ.

- Advertisement -
spot_img

Latest News

error: Content is protected !!