Wednesday, October 14, 2026
Homeಕರಾವಳಿವಿಷ ಸೇವಿಸಿದ್ದ ಶಿವಮೊಗ್ಗದ ಕ್ರಿಮಿನಲ್ ಆರೋಪಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು

ವಿಷ ಸೇವಿಸಿದ್ದ ಶಿವಮೊಗ್ಗದ ಕ್ರಿಮಿನಲ್ ಆರೋಪಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು

- Advertisement -
- Advertisement -

ಮಂಗಳೂರು: ವಿಷ ಸೇವಿಸಿದ್ದ ಶಿವಮೊಗ್ಗದ ಕ್ರಿಮಿನಲ್ ಆರೋಪಿಯೊಬ್ಬ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಸುಹೇಲ್ ಕೋಬ್ರಾ ಮೃತಪಟ್ಟ ಆರೋಪಿಯಾಗಿದ್ದು, ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ತಡರಾತ್ರಿ 1 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ.

ಮೃತ ಸುಹೇಲ್ ಗೆ 2 ವರ್ಷ ಗಡಿಪಾರು ಆದೇಶವಾಗಿದ್ದು, ಆದೇಶಕ್ಕೆ ಬೆದರಿದ್ದ ಆರೋಪಿ ಪೊಲೀಸ್ ನೋಟಿಸ್ ತಲುಪಿದ ನಂತರ ವಿಷ ಸೇವಿಸಿದ್ದ ಎಂದು ಹೇಳಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಿವಾಸಿಯಾಗಿದ್ದ ಸುಹೇಲ್ ನವೆಂಬರ್ 28ರಂದು ಮನೆಯಲ್ಲಿ ವಿಷ ಸೇವಿಸಿದ್ದನು.
ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಹಾಗು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಯೆನಪೋಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಸುಹೇಲ್ ವಿರುದ್ಧ ತೀರ್ಥಹಳ್ಳಿ ಹಾಗು ಮಾಳೂರು ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ‌ಪ್ರಕರಣ ದಾಖಲಾಗಿದ್ದವು.

- Advertisement -

Latest News

error: Content is protected !!