Saturday, June 6, 2026
Homeಅಪರಾಧಸಹದ್ಯೋಗಿಗಳ ಮೇಲೆ ಸಿಆರ್ ಪಿಎಫ್ ಜವಾನನ ಗುಂಡಿನ ದಾಳಿ; ನಾಲ್ವರ ಸಾವು, ಮೂವರಿಗೆ ಗಾಯ!

ಸಹದ್ಯೋಗಿಗಳ ಮೇಲೆ ಸಿಆರ್ ಪಿಎಫ್ ಜವಾನನ ಗುಂಡಿನ ದಾಳಿ; ನಾಲ್ವರ ಸಾವು, ಮೂವರಿಗೆ ಗಾಯ!

- Advertisement -
- Advertisement -

ಸುಕ್ಮಾ: ತನ್ನ ಸಹೋದ್ಯೋಗಿಗಳ ಮೇಲೆ ಸಿಆರ್ ಪಿಎಫ್ ಜವಾನರೊಬ್ಬರು ಗುಂಡು ಹಾರಿಸಿದ್ದು, ನಾಲ್ವರು ಸಾವನ್ನಪ್ಪಿ, ಮೂರು ಮಂದಿ ಗಾಯಗೊಂಡ ಘಟನೆ ಸೋಮವಾರ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದಲ್ಲಿ ಸಂಭವಿಸಿದೆ.

ರಾಜ್ಯದ ರಾಜಧಾನಿ ರಾಯಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಜಿಲ್ಲೆಯ ಲಿಂಗಂಪಲ್ಲಿ ಗ್ರಾಮದ ಸಿಆರ್‌ಪಿಎಫ್‌ನ 50ನೇ ಬೆಟಾಲಿಯನ್‌ನ ಶಿಬಿರದಲ್ಲಿ ಮುಂಜಾನೆ 3.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ ತಿಳಿಸಿದ್ದಾರೆ.

ಒಬ್ಬ ಯೋಧ ತನ್ನ ಎಕೆ-47 ರೈಫಲ್‌ ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯ ಪ್ರಕಾರ ಅಧಿಕಾರಿ ತಿಳಿಸಿದ್ದಾರೆ. ತಕ್ಷಣವೇ ಜವಾನನನ್ನು ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

- Advertisement -

Latest News

error: Content is protected !!