- Advertisement -
- Advertisement -
ಮಲ್ಪೆ: ಶನಿವಾರದಿಂದ ಕಡಲತೀರಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ರವಿವಾರ ಬೆಳಗ್ಗಿನಿಂದ ಪ್ರವಾಸಿಗರ ವಾಹನಗಳು ಬೀಚ್ ಕಡೆಗೆ ಬರಲಾರಂಭಿಸಿದರು. ಈ ನಿಟ್ಟಿನಲ್ಲಿ ರವಿವಾರದಂದು ಮಲ್ಪೆ ಬೀಚ್ ಮತ್ತು ಸೀವಾಕ್ ವೇಯಲ್ಲಿ ಜನಸಂದಣಿ ಕಂಡು ಬಂದಿದೆ.
ಮಳೆಗಾಲದಲ್ಲಿ ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಜಿಲ್ಲಾಡಳಿತ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸುತ್ತದೆ. ಆದರೆ ರವಿವಾರದಂದು ಮಾತ್ರ ಬಹುತೇಕ ಎಲ್ಲ ಪ್ರವಾಸಿಗರು ತಡೆಬೇಲಿ ದಾಟಿ ನೀರಿಗಿಳಿದು ಈಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ.
ರವಿವಾರದಿಂದ ಸೈಂಟ್‌ಮೇರಿಸ್ ದ್ವೀಪ ಪ್ರವೇಶವನ್ನು ಜಿಲ್ಲಾಡಳಿತ ಮುಕ್ತಗೊಳಿಸಿದ್ದು, ರವಿವಾರದಿಂದಲೇ ದ್ವೀಪಯಾನ ಆರಂಭವಾಗಿದೆ. ಹೆಚ್ಚಿನ ಪ್ರವಾಸಿಗರು ಸೈಂಟ್‌ಮೇರಿಸ್ ದ್ವೀಪಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನದ ಬಳಿಕ ಸೀವಾಕ್ ಮತ್ತು ಇಲ್ಲಿನ ಗಾರ್ಡನ್‌ನಲ್ಲೂ ಜನಸಂದಣಿ ಕಂಡುಬಂದಿದೆ.
- Advertisement -