Friday, June 5, 2026
Homeತಾಜಾ ಸುದ್ದಿಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ರಚನೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ರಚನೆ

- Advertisement -
- Advertisement -

ದಾವಣಗೆರೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ರಚಿಸಲಾಗಿದೆ. ಈವರೆಗೆ 384 ಜನರು ಸದಸ್ಯತ್ವ ಪಡೆದಿದ್ದಾರೆ ಅಲ್ಲದೆ 19 ಚಿತ್ರಗಳ ಹೆಸರು ನೋಂದಣಿಯಾಗಿದೆ ಎಂದು ಚೇಂಬರ್ ನೂತನ ಅಧ್ಯಕ್ಷ ಎಂ.ಎಸ್. ರವೀಂದ್ರ ತಿಳಿಸಿದರು.

ಅವರು ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗಾಗಲೇ ಕಳೆದ 80 ವರ್ಷದಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೇವಲ ನಿರ್ಮಾಪಕರು, ವಿತರಕರು, ಹಂಚಿಕೆದಾರರಿಗೆ ಮಾತ್ರವೇ ಸದಸ್ಯತ್ವ ನೀಡಲಾಗುತ್ತದೆ. ‌ಅದು ವರ್ಷಕ್ಕೆ ಒಂದು ಲಕ್ಷ ಸದಸ್ಯತ್ವ ಶುಲ್ಕ ನೀಡಬೇಕು ಮತ್ತು ನವೀಕರಣ ಮಾಡಿಕೊಳ್ಳಬೇಕು. ಹಾಗಾಗಿ ಪರ್ಯಾಯ ಚೇಂಬರ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ,’ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸದಸ್ಯತ್ವವನ್ನೇ ನೀಡುವುದಿಲ್ಲ. ಒಂದು ಚಿತ್ರವಾಗಬೇಕಾದರೆ ನಟ, ನಟಿ, ಪೋಷಕ ನಟರು, ತಂತ್ರಜ್ಞರು ಎಲ್ಲರೂ ಬೇಕು. ಮಂಡಳಿಯ ಪದಾಧಿಕಾರಿ ಆಗಲು ತಮಗೆ ಅನುಕೂಲ ಆಗುವಂತೆ ಬೈಲಾ ರಚಿಸಿಕೊಳ್ಳಲಾಗಿದೆ. ಚಿತ್ರರಂಗದ ಎಲ್ಲರಿಗೂ ಮುಕ್ತ ಅವಕಾಶ ದೊರೆಯಬೇಕು ಎಂಬ ಸದುದ್ದೇಶದಿಂದ ಪ್ರತ್ಯೇಕ ಮಂಡಳಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

- Advertisement -

Latest News

error: Content is protected !!