Saturday, June 13, 2026
Homeತಾಜಾ ಸುದ್ದಿCPI(M) ಹಿರಿಯ ನಾಯಕ ಸೀತಾರಾಮ್ ಯೆಚೂರಿ ವಿಧಿವಶ

CPI(M) ಹಿರಿಯ ನಾಯಕ ಸೀತಾರಾಮ್ ಯೆಚೂರಿ ವಿಧಿವಶ

- Advertisement -
- Advertisement -

ನವದೆಹಲಿ; CPI(M) ಹಿರಿಯ ನಾಯಕ ಸೀತಾರಾಮ್ ಯೆಚೂರಿ(72) ವಿಧಿವಶರಾಗಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ದೆಹಲಿಯ ಏಮ್ಸ್’ಗೆ ದಾಖಲಾಗಿದ್ದ ಸೀತಾರಾಮ್ ಯೆಚೂರಿ ಗುರುವಾರ ನಿಧನರಾಗಿದ್ದಾರೆ. ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ ಅವರನ್ನ ಆಗಸ್ಟ್ 19 ರಂದು ಏಮ್ಸ್’ಗೆ ದಾಖಲಿಸಲಾಗಿತ್ತು.ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಯೆಚೂರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿಯ ಸಮಯದಲ್ಲಿ ಅಧ್ಯಯನ ಮಾಡಿದರು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನ ಪೂರ್ಣಗೊಳಿಸಿದರು. ಅವರು ಪತ್ನಿ ಸೀಮಾ ಚಿಸ್ತಿ ಯೆಚೂರಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!