Thursday, June 4, 2026
Homeಕರಾವಳಿತಲಪಾಡಿ ಗಡಿಯಲ್ಲಿ ಕೋವಿಡ್ ಟೆಸ್ಟ್ ಸ್ಥಗಿತ!

ತಲಪಾಡಿ ಗಡಿಯಲ್ಲಿ ಕೋವಿಡ್ ಟೆಸ್ಟ್ ಸ್ಥಗಿತ!

- Advertisement -
- Advertisement -

ಮಂಗಳೂರು: ಕೇರಳ ಗಡಿ ಭಾಗದಲ್ಲಿ ಟೆಸ್ಟಿಂಗ್ ನಡೆಸುತ್ತಿರುವುದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಕೇಸ್ ಹೆಚ್ಚಳಗೊಳ್ಳುತ್ತಿದೆ. ಹೀಗಾಗಿ ಜಿಲ್ಲೆಯ ಗಡಿಭಾಗ ತಲಪಾಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೋವಿಡ್ ಟೆಸ್ಟ್ ಸ್ಥಗಿತಗೊಳಿಸಿದೆ.

ಗಡಿಯಲ್ಲಿ ಸ್ವಾಬ್ ಟೆಸ್ಟಿಂಗ್ ‌ಮಾಡಿದ ಬಳಿಕ ಕೇರಳದ ಪ್ರಯಾಣಿಕರು ಮಂಗಳೂರಿಗೆ ಬರುತ್ತಿದ್ದರು. ಗಡಿಯಲ್ಲಿ ಟೆಸ್ಟಿಂಗ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಕೇಸ್ ಹೆಚ್ಚಳವಾಗಿತ್ತು. ನಿನ್ನೆ ರಾಜ್ಯದಲ್ಲೇ ಅತೀ ಹೆಚ್ಚಿನ 410 ಕೇಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿತ್ತು‌.

ಇಂದು ಏಕಾಏಕಿ ಜಿಲ್ಲಾಡಳಿತ ಟೆಸ್ಟಿಂಗ್ ಸ್ಥಗಿತಗೊಳಿಸಿದ ಕಾರಣ
ಟೆಸ್ಟಿಂಗ್ ಮಾಡಿಸಿಕೊಳ್ಳಲು ಗಡಿಯಲ್ಲಿ ಸಾಲುಗಟ್ಟಿ ನಿಂತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡು ಡೋಸ್ ಪಡೆದವರಿಗೆ ಮಂಗಳೂರು ಪ್ರವೇಶಕ್ಕೆ ಅನುಮತಿ ಕೊಡಿ ಅಂತ ಅಸಮಾಧಾನ ಸ್ಥಳದಲ್ಲಿ ಕೇಳಿಬಂದಿತ್ತು.

- Advertisement -

Latest News

error: Content is protected !!