Thursday, May 2, 2024
Homeತಾಜಾ ಸುದ್ದಿಕೊರೊನಾ ಕಾಲರ್ ಟ್ಯೂನ್ ಕೇಳಿ ಕೇಳಿ ಸುಸ್ತಾದವರಿಗೆ ಇಲ್ಲಿದೆ ಸಿಹಿ ಸುದ್ದಿ

ಕೊರೊನಾ ಕಾಲರ್ ಟ್ಯೂನ್ ಕೇಳಿ ಕೇಳಿ ಸುಸ್ತಾದವರಿಗೆ ಇಲ್ಲಿದೆ ಸಿಹಿ ಸುದ್ದಿ

spot_img
- Advertisement -
- Advertisement -

ನವದೆಹಲಿ: ಇಷ್ಟು ದಿನ ಕೊರೊನಾ ಕಾಲರ್ ಟ್ಯೂನ್ ಕೇಳಿ ಕೇಳಿ ಸುಸ್ತಾಗಿ ಹೋಗಿದ್ದ ಮಂದಿಗೆ ಕೊನೆಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನಪ್ಪಾ ಅಂದ್ರೆ ಶೀಘ್ರದಲ್ಲೇ ಕಾಲರ್ ಟ್ಯೂನ್​ಗೆ ಅಂತ್ಯ ಹಾಡಲಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಕಾಲರ್​ ಟ್ಯೂನ್​ಗಳನ್ನು ಸ್ಥಗಿತಗೊಳಿಸುವುದನ್ನು ಪರಿಶೀಲಿಸುತ್ತಿದೆ.

ಕೋವಿಡ್-19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಪ್ರೀ-ಕಾಲ್-ಆಡಿಯೋ ಜಾಹೀರಾತುಗಳು ಮತ್ತು ಕಾಲರ್-ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು. ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೋವಿಡ್ ಪೂರ್ವ ಕರೆ ಸಂದೇಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೋವಿಡ್ ಕಾಲರ್ ಟ್ಯೂನ್‌ಗಳಿಂದಾಗಿ ತುರ್ತು ಸಮಯದಲ್ಲಿ ಬೇರೆಯವರಿಗೆ ಫೋನ್ ಕರೆಗಳನ್ನು ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲರ್ ಟ್ಯೂನ್‌ಗಳನ್ನು ಅಮಾನತುಗೊಳಿಸಲು ಕೇಂದ್ರವು ನಿರ್ಧರಿಸಿದೆ. ಈ ಬಗ್ಗೆ ದೂರಸಂಪರ್ಕ ಇಲಾಖೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.

ಭಾರತದ ಸೆಲ್ಯುಲರ್ ಆಪರೇಟರ್‌ಗಳ ಕೇಂದ್ರವು ಕಾಲರ್ ಟ್ಯೂನ್ ಅನ್ನು ಸ್ಥಗಿತಗೊಳಿಸಲು ಮೊಬೈಲ್ ಬಳಕೆದಾರರಿಂದ ಸ್ವೀಕರಿಸಿದ ವಿನಂತಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿವೆ. ಹೀಗಾಗಿ ಕಾಲರ್​ ಟ್ಯೂಬ್​ ರದ್ದು ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!