Thursday, June 25, 2026
Homeತಾಜಾ ಸುದ್ದಿಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋದ ಪ್ರೇಮಿಗಳು ನಾಪತ್ತೆ; ತೀವ್ರ ಹುಡುಕಾಟ

ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋದ ಪ್ರೇಮಿಗಳು ನಾಪತ್ತೆ; ತೀವ್ರ ಹುಡುಕಾಟ

- Advertisement -
- Advertisement -

ಕಾರವಾರ: ಸೆಲ್ಫಿ ಹುಚ್ಚಿನಿಂದ ಪ್ರೇಮಿಗಳು ಪ್ರಾಣ ಕಳೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ಬಳಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಅತಿ ದೊಡ್ಡ ಅಣೆಕಟ್ಟು ಸೂಫಾ ಡ್ಯಾಮ್ ಬಳಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಯತಪ್ಪಿ ಪ್ರೇಮಿಗಳು ನೀರಿಗೆ ಬಿದ್ದಿದ್ದಾರೆ.

ಪೊಲೀಸರು ಹಾಗೂ ಅಗ್ನಿಶಾಮಕದಳದವರು ಅಣೆಕಟ್ಟು ಎದುರಿನ ನದಿಯ ನೀರಿನಲ್ಲಿ ಹುಡುಕಾಟ ನಡೆಸಿದ್ದರೂ ಪ್ರೇಮಿಗಳ ಸುಳಿವು ಸಿಕ್ಕಿಲ್ಲ. ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದು ಇದುವರೆಗೂ ಪ್ರೇಮಿಗಳು ಪತ್ತೆಯಾಗಿಲ್ಲ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!