Thursday, July 16, 2026
Homeಕರಾವಳಿಉಡುಪಿಕಾಂತಾರಾ ಹಿಂದಿ ಟ್ರೈಲರ್ ರಿಲೀಸ್ ಗೆ ಕೌಂಟ್ ಡೌನ್ ಶುರು

ಕಾಂತಾರಾ ಹಿಂದಿ ಟ್ರೈಲರ್ ರಿಲೀಸ್ ಗೆ ಕೌಂಟ್ ಡೌನ್ ಶುರು

- Advertisement -
- Advertisement -

ಬೆಂಗಳೂರು; ಇಡೀ ದಕ್ಷಿಣ ಭಾರತದ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ `ಕಾಂತಾರಾ’ ಸಿನಿಮಾವನ್ನು ಬಹುಭಾಷೆಗಳಿಗೆ ಡಬ್ ಮಾಡಲು ಬೇಡಿಕೆ ಜಾಸ್ತಿಯಾಗಿದೆ. ಇದೀಗ ಕಾಂತಾರಾ ಹಿಂದಿ ಟ್ರೈಲರ್ ರಿಲೀಸ್ ಮಾಡಲು ಕೌಂಟ್ ಡೌನ್ ಶುರುವಾಗಿದೆ.

ಸೆ. 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಪರಭಾಷೆಯ ಪ್ರೇಕ್ಷಕರಿಂದ ಚಿತ್ರಕ್ಕೆ ಡಿಮ್ಯಾಂಡ್ ಬಂದಿದೆ. ಚಿತ್ರವನ್ನು ಡಬ್ಬಿಂಗ್ ಮಾಡಲು ಬೇಡಿಕೆ ಕೂಡ ಇಡಲಾಗಿದೆ. ಕನ್ನಡದ `ಕಾಂತಾರಾ’ ಸಕ್ಸಸ್ ನಂತರ ಹೊಂಬಾಳೆ ನಿರ್ಮಾಣ ಸಂಸ್ಥೆ ಕೂಡ ಬಹುಭಾಷೆಗಳಲ್ಲಿ ಡಬ್ಬಿಂಗ್ ಮಾಡಿ, ತೆರೆಗೆ ತರಲು ಮುಂದಾಗಿದೆ. ಸದ್ಯ ಹಿಂದಿಯಲ್ಲಿ ಟ್ರೈಲರ್ ಕೌಂಟ್ ಡೌನ್ ಶುರುವಾಗಿದೆ.

ಕಾಂತಾರಾ’ ಚಿತ್ರದ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9ರಂದು ಬೆಳಿಗ್ಗೆ 9.10ಕ್ಕೆ ರಿಲೀಸ್ ಆಗಲಿದೆ ಎಂದು ತಮ್ಮ ಅಧಿಕೃತ ಖಾತೆಗೆ ಮೂಲಕ ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್ ಮಾಡಿದೆ.

- Advertisement -

Latest News

error: Content is protected !!