Thursday, June 4, 2026
Homeತಾಜಾ ಸುದ್ದಿಭಾರತದಲ್ಲಿ ಕೊರೊನ ತಾಂಡವ : 24 ಗಂಟೆಗಳಲ್ಲಿ 4,970 ಸೋಂಕು...

ಭಾರತದಲ್ಲಿ ಕೊರೊನ ತಾಂಡವ : 24 ಗಂಟೆಗಳಲ್ಲಿ 4,970 ಸೋಂಕು ದೃಢ , ಒಟ್ಟು ಸೋಂಕಿತರ ಸಂಖ್ಯೆ 1,01,139

- Advertisement -
- Advertisement -

ನವದೆಹಲಿ :ಭಾರತದಲ್ಲಿ ಕೊರೊನ ತಾಂಡವ ಮುಂದುವರೆದಿದ್ದು ,ಕಳೆದ 24 ಗಂಟೆಗಳಲ್ಲೇ 4,970 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, 134 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,139ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 3,163ಕ್ಕೆ ಏರಿದೆ.


ಭಾರತದಲ್ಲಿ 1,01,139 ಕೊರೊನಾ ವೈರಸ್ ಸೋಂಕಿತರ ಪೈಕಿ 39,233 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಳಿದಂತೆ 57,933 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

- Advertisement -

Latest News

error: Content is protected !!