Friday, September 13, 2024
Homeತಾಜಾ ಸುದ್ದಿಕೊರೋನಾದಿಂದ ತಪ್ಪಿಸಿಕೊಳ್ಳಲು ಮರವೇರಿ ಕುಳಿತ ಗ್ರಾಮಸ್ಥರು.!

ಕೊರೋನಾದಿಂದ ತಪ್ಪಿಸಿಕೊಳ್ಳಲು ಮರವೇರಿ ಕುಳಿತ ಗ್ರಾಮಸ್ಥರು.!

spot_img
- Advertisement -
- Advertisement -

ಕೊರೋನಾ ಮಹಾಮಾರಿಗೆ ಇಡೀ ದೇಶ 21 ದಿನಗಳ ಕಾಲ‌ ಸಂಪೂರ್ಣ ಸ್ತಬ್ಧವಾಗಿದ್ದು, ಬೇರೆ ಊರುಗಳಿಂದ ಬಂದವರನ್ನು ಪ್ರತ್ಯೇಕವಾಗಿರಿಸುತ್ತಿದ್ದಾರೆ. ಆದರೆ ಇಲ್ಲೊಂದು ಪುಟ್ಟ ಹಳ್ಳಿಯಲ್ಲಿ ಪ್ರತ್ಯೇಕವಾಗಿರಲು ಮರದ ಮೇಲೆ ಹತ್ತಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಪುರುಲಿಯಾ ಎನ್ನುವ ಗ್ರಾಮದ ಕೆಲವರು ಕೆಲಸದ ನಿಮಿತ್ತ ದೆಹಲಿ ಸೇರಿದಂತೆ ಹಲವು ಭಾಗಗಳಿಗೆ ತೆರಳಿದ್ದರು. ಆದರೀಗ ಕೊರೋನಾದಿಂದ ಕೆಲಸವಿಲ್ಲದೇ ತಮ್ಮೂರಿಗೆ ವಾಪಾಸಾಗಿದ್ದಾರೆ. ಈ ರೀತಿ ವಾಪಾಸದವರು 14 ದಿನ ಪ್ರತ್ಯೇಕವಾಗಿರಬೇಕು. ಆದರೆ ಮನೆಯಲ್ಲಿ ಪ್ರತ್ಯೇಕ ಕೋಣೆ ಇಲ್ಲದೇ ಇರುವುದರಿಂದ ಅನೇಕರು ಮರಗಳ ಮೇಲೆ ಗುಡಿಸಲು ಹಾಕಿಕೊಂಡಿದ್ದಾರೆ.

ಈ ಗುಡಿಸಿಲಿನಲ್ಲಿ 14 ದಿನ ಕಳೆದ ಬಳಿಕ ಮನೆಗಳಿಗೆ ಹೋಗುತ್ತಾರಂತೆ. ಈ ಹಿಂದೆ ಆನೆಗಳ ಚಲನವಲನ ವೀಕ್ಷಿಸಲು ಈ ರೀತಿ ಮರದ ಮೇಲೆ ವಾಸಿಸುತ್ತಿದ್ದರಂತೆ. ಆದರೀಗ ಕೊರೋನಾದಿಂದ ತಪ್ಪಿಸಿಕೊಳ್ಳಲು ಈ ಮಾರ್ಗ ಕಂಡುಕೊಂಡಿದ್ದಾರೆ.

- Advertisement -
spot_img

Latest News

error: Content is protected !!