Thursday, June 4, 2026
Homeಕರಾವಳಿಕಡಬದ ವ್ಯಕ್ತಿಗೆ ಕೊರೋನಾ ನೆಗೆಟಿವ್, ನೆಮ್ಮದಿಯ ನಿಟ್ಟುಸಿರು ಬಿಟ್ಟ ಕಡಬ ಜನತೆ

ಕಡಬದ ವ್ಯಕ್ತಿಗೆ ಕೊರೋನಾ ನೆಗೆಟಿವ್, ನೆಮ್ಮದಿಯ ನಿಟ್ಟುಸಿರು ಬಿಟ್ಟ ಕಡಬ ಜನತೆ

- Advertisement -
- Advertisement -

ಕಡಬ: ಕೊರೋನಾ ಪೀಡಿತ ಕಡಬದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯನ್ನು ಎರಡನೆಯ ಬಾರಿ ಮಾಡಲಾಗಿದ್ದು ಇದೀಗ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಡಬದಲ್ಲಿದ್ದ ಆತಂಕ ದೂರವಾಗಿದೆ.

42 ವರ್ಷದ ಶಿಕ್ಷಕರೋರ್ವರಿಗೆ ಜೂನ್ 5 ರಂದು ಪಾಸಿಟಿವ್ ಬಂದಿದ್ದು ಬಳಿಕ ಅವರನ್ನು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಇದೀಗ ಎರಡನೆಯ ಗಂಟಲು ದ್ರವ ಪರೀಕ್ಷೆ ಯಲ್ಲಿ ನೆಗೆಟಿವ್ ಬಂದಿದ್ದು ಇಂದು (ಜೂ.12) ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಡಬ ಜನತೆಯ ಆತಂಕ ದೂರ:
ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಸಹಜವಾಗಿಯೇ ಇಲ್ಲಿಯ ಜನರಲ್ಲಿ ಆತಂಕ ಉಂಟಾಗಿತ್ತು. ಬಳಿಕ ಸುತ್ತಮುತ್ತಲಿನ ಮನೆ, ಸಿಎ ಬ್ಯಾಂಕ್ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೆ ಅವರ ಸಂಪರ್ಕದಲ್ಲಿದ್ದ ಹಲವರಿಗೆ ಕ್ವಾರಂಟೈನ್ ಮಾಡಲಾಗಿತ್ತು, ಕ್ವಾರಂಟೈನ್ ಮಾಡಲಾಗಿದ್ದವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇದರ ಫಲಿತಾಂಶ ನಾಳೆ ತಿಳಿದು ಬರಲಿದೆ.

- Advertisement -

Latest News

error: Content is protected !!