Thursday, June 4, 2026
Homeತಾಜಾ ಸುದ್ದಿರಾಕಿಂಗ್ ಸ್ಟಾರ್ ಗೆ ಕೊರೊನಾ ಭೀತಿ: ಸೆಲ್ಫ್ ಕ್ವಾರಂಟೈನ್ ಗೆ ಒಳಗಾದ ನಟ ಯಶ್

ರಾಕಿಂಗ್ ಸ್ಟಾರ್ ಗೆ ಕೊರೊನಾ ಭೀತಿ: ಸೆಲ್ಫ್ ಕ್ವಾರಂಟೈನ್ ಗೆ ಒಳಗಾದ ನಟ ಯಶ್

- Advertisement -
- Advertisement -

ಬೆಂಗಳೂರು: ‘ಕೆ.ಜಿ.ಎಫ್: ಚಾಪ್ಟರ್ 2’ ಚಿತ್ರದ ಶೂಟಿಂಗ್ ನಲ್ಲಿ ಹೈದರಾಬಾದ್ ನಿಂದ ವಾಪಸ್ ಆದ ನಂತರ ಕನ್ನಡ ನಟ ಯಶ್ ಅವರು ಕೊರೊನಾ ಸೋಂಕಿನ ಭೀತಿಯಲ್ಲಿ ‘ಸೆಲ್ಫ್‌ ಕ್ವಾರಂಟೈನ್’ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯಶ್ ಅವರು ತಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎರಡು ವಾರಗಳ ಕಾಲ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಅವರಿಂದ ದೂರದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಹೈದರಾಬಾದ್ ನಲ್ಲಿ ಕಳೆದ ಎರಡು ವಾರಗಳಿಂದ ಯಶ್ ಅವರು ಕೆ.ಜಿ.ಎಫ್: ಚಾಪ್ಟರ್ 2 ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸ್ಸು ಬಂದಿದ್ದಾರೆ. ಹೀಗಾಗಿ ಯಶ್ ಅವರು ಮುಂಜಾಗ್ರತಾ ಕ್ರಮವಾಗಿ ತಮ್ಮನ್ನು ತಾವು ‘ಸೆಲ್ಫ್‌ ಕ್ವಾರಂಟೈನ್’ ಮಾಡಿಕೊಂಡಿದ್ದಾರೆ. ಸದ್ಯ ಯಶ್ ಅವರು ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದಾರೆ. ಎನ್ನಲಾಗಿದೆ.

- Advertisement -

Latest News

error: Content is protected !!