Saturday, May 18, 2024
Homeಕರಾವಳಿಉಡುಪಿಉಡುಪಿಯಲ್ಲಿ ಸಮುದಾಯಕ್ಕೆ ಹರಡಿತ್ತಿದ್ಯಾ ಕೊರೊನಾ ಮಹಾಮಾರಿ ?

ಉಡುಪಿಯಲ್ಲಿ ಸಮುದಾಯಕ್ಕೆ ಹರಡಿತ್ತಿದ್ಯಾ ಕೊರೊನಾ ಮಹಾಮಾರಿ ?

spot_img
- Advertisement -
- Advertisement -

ಉಡುಪಿ : ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಕೊರನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಗುತ್ತಲೇ ಸಾಗುತ್ತಿದೆ.  ಟ್ರಾವೆಲ್  ಹಿಸ್ಟರಿ ಇಲ್ಲದೇ ಇದ್ದವರಲ್ಲೂ ಕೊರೊನಾ ಕಾಣಿಸಿಕೊಳ್ಳುತ್ತಿರೋದು ಇದೆಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋ ಭಯ ಮೂಡಿಸುತ್ತಿದೆ.

ಇದೀಗ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ಉಡುಪಿಯಲ್ಲಿ ಪ್ರಾಥಮಿಕ ಸಂಪರ್ಕದಿಂದಲೇ ಹೆಚ್ಚಾಗಿ ಕಂಡು ಬರುತ್ತಿದೆ. ನಿನ್ನೆ ಕೊರೊನಾ ಪಾಸಿಟಿವ್ ಬಂದವರಲ್ಲಿ 19 ಜನರಿಗೆ ಪ್ರಾಥಮಿಕ ಸಂಪರ್ಕದಿಂದಲೇ ಕೊರೊನಾ ಬಂದಿದೆ ಅನ್ನೋದು ದೃಢವಾಗಿದೆ. ಹೀಗಾಗಿ ಉಡುಪಿಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಅನ್ನೋ ಸೂಚನೆ ಸಿಗುತ್ತಿದೆ. ಇನ್ನು ಜನ ಹೆಚ್ಚಾಗಿ ಓಡಾಡುವ  ಜಾಗಗಳಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ತಪಾಸಣೆ ನಡೆಸಿದ್ದರು. 279 ಜನರ ಗಂಟಲು ದ್ರವದ ಪರೀಕ್ಷೆ ನಡೆಸಿದ್ದರು. ಅದರಲ್ಲಿ 90 ಶೇಕಡಾದಷ್ಟು ಜನರಿಗೆ ಕೊರೊನಾ ಇರೋದು ದೃಢಪಟ್ಟಿದೆ. ಹಾಗಾಗಿ ಕೊರೊನಾ ಸಮುದಾಯಕ್ಕೆ ಹರಡಿದೆ ಅನ್ನೋ ಸೂಚನೆ ಸಿಕ್ಕಿದೆ.

ಹೀಗಾಗಿ ಸುಮ್ ಸುಮ್ಮನೆ ಕಾರಣವಿಲ್ಲದೇ ಮನೆಯಿಂದ ಹೊರಗೆ ಬರುವ ಜನ ಖಂಡಿತ ಎಚ್ಚರ ವಿಹಸಬೇಕು. ಇಲ್ಲ ಅಂದ್ರೆ ಪ್ರತಿ ಮನೆಯಲ್ಲೂ ಕೊರೊನಾ ಸೋಂಕಿತರನ್ನು ನೋಡುವ ದಿನ ದೂರವಿಲ್ಲ.

- Advertisement -
spot_img

Latest News

error: Content is protected !!