Friday, June 5, 2026
Homeತಾಜಾ ಸುದ್ದಿ‘ಹಿಂದೂ’ ಎಂಬ ಪದದ ಮೂಲ ಭಾರತದಲ್ಲ. ಅದು ಪರ್ಷಿಯನ್‌ ಮೂಲದ ಭಾಷೆ: ವಿವಾದಕ್ಕೀಡಾದ ಸತೀಶ್‌ ಜಾರಕಿಹೊಳಿ...

‘ಹಿಂದೂ’ ಎಂಬ ಪದದ ಮೂಲ ಭಾರತದಲ್ಲ. ಅದು ಪರ್ಷಿಯನ್‌ ಮೂಲದ ಭಾಷೆ: ವಿವಾದಕ್ಕೀಡಾದ ಸತೀಶ್‌ ಜಾರಕಿಹೊಳಿ ಹೇಳಿಕೆ

- Advertisement -
- Advertisement -

ಬೆಂಗಳೂರು: ‘ಹಿಂದೂ’ ಎಂಬ ಪದದ ಮೂಲ ಭಾರತದಲ್ಲ. ಅದು ಪರ್ಷಿಯನ್‌ ಮೂಲದ ಭಾಷೆ ಎಂದು ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿರುವುದು ವಿವಾದಕ್ಕೀಡಾಗಿದೆ.

ಹಿಂದೂ ಎಂಬ ಪದ ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದನ್ನು ಚರ್ಚೆ ಮಾಡಬೇಕು ಎಂದಿದ್ದಾರೆ ಸತೀಶ್ ಜಾರಕಿಹೊಳಿ.  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾರಕಿಹೊಳಿ ಅವರ ಮಾತು ಹಿಂದೂಗಳಿಗೆ ಮಾಡಿದ ಅವಮಾನ ಮತ್ತು ಪ್ರಚೋದನೆ ಎಂದು ಬಿಜೆಪಿ ಟೀಕಿಸಿದೆ.

- Advertisement -

Latest News

error: Content is protected !!