Thursday, June 4, 2026
Homeಕರಾವಳಿಬಂಟ್ವಾಳ; ಶಾಸಕ ರಾಜೇಶ್ ನಾಯ್ಕ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು

ಬಂಟ್ವಾಳ; ಶಾಸಕ ರಾಜೇಶ್ ನಾಯ್ಕ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು

- Advertisement -
- Advertisement -

ಬಂಟ್ವಾಳ; ಶಾಸಕ ರಾಜೇಶ್ ನಾಯ್ಕ್  ಸಮ್ಮುಖದಲ್ಲಿ ಉಳಿ  ಕಾಂಗ್ರೆಸ್ ಉಪಾಧ್ಯಕ್ಷರು ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ ಪೂಜಾರಿ ಜಾರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಗೋಪಾಲ್ ಪೂಜಾರಿಯವರು ಕಾಂಗ್ರೆಸ್‌  ಪಕ್ಷವನ್ನು ತೊರೆದು ಬಿಜೆಪಿ ಪಾರ್ಟಿಗೆ ಸೇರ್ಪಡೆಗೊಂಡರು.

 ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ರವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಹಾಗೂ  ಬಿಜೆಪಿ ಪಾರ್ಟಿಯ ತತ್ವ  ಸಿದ್ದಾಂತವನ್ನು ಮೆಚ್ಚಿ ಕ್ಷೇತ್ರ  ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರ  ಉಪಸ್ಥಿತಿಯಲ್ಲಿ  ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಯಾದ ರವೀಶ್ ಶೆಟ್ಟಿ ಕರ್ಕಳ ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ  ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್ ಜಿಲ್ಲಾ ಯುವಮೊರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಕ್ಷೇತ್ರ  ಉಪಾಧ್ಯಕ್ಷರಾದ  ಚಿದಾನಂದ ರೈ   ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ ಕ್ಷೇತ್ರ ಒಬಿಸಿ ಅಧ್ಯಕ್ಷರಾದ  ಆನಂದ ಶಂಭೂರು ಉಳಿ ಗ್ರಾಮ  ಪಂಚಾಯತ್  ಅಧ್ಯಕ್ಷರಾದ  ಸುರೇಶ್ ಪೂಜಾರಿ ಶಾಂತಪ್ಪ ಪೂಜಾರಿ  ಮುಂತಾದ ಪ್ರಮುಖರು ಉಪಸ್ಥಿತರಿದ್ದರು .

- Advertisement -

Latest News

error: Content is protected !!