- Advertisement -
- Advertisement -
ಕಾಸರಗೋಡು: ಕಾಂಗ್ರೆಸ್ ಮುಖಂಡನೋರ್ವನ ಕೊಲೆ ಪ್ರಕರಣದ ಪ್ರಥಮ ಆರೋಪಿಗೆ ಜೀವಾವಧಿ ಸಜೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕಾಸರಗೋಡಿನ ಕಾಂಗ್ರೆಸ್ ಮುಖಂಡರಾದ ಕುಂಟಾರು ಬಾಲನ್(45) ಅವರನ್ನು ಆರೋಪಿ ವಿ.ರಾಧಾಕೃಷ್ಣನ್ ಸೇರಿದಂತೆ ಇತರ ಆರೋಪಿಗಳು ಕೊಲೆ ಮಾಡಿದ್ದರು.
ಆದರೆ ಇದೀಗ ಪ್ರಕರಣದ ಪ್ರಮುಖ ಆರೋಪಿ ವಿ.ರಾಧಾಕೃಷ್ಣನ್ ನಿಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ದಂಡ ಮೊತ್ತವನ್ನು ಬಾಲನ್ ರ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಉಳಿದ ಆರೋಪಿಗಳಾದ ಕಟ್ಟತ್ತ ಬೈಲ್ ನ ವಿಜಯನ್ (42) ಕುಂಟಾ ರಿನ ಕೆ.ಕುಮಾರನ್ (51), ಅತ್ತನಾಡಿಯ ದಿಲೀಪ್ ಕುಮಾರ್ (41) ನನ್ನು ಖುಲಾಸೆ ಗೊಳಿಸಿದೆ.
ಕಾಂಗ್ರೆಸ್ ಮುಖಂಡ ಕುಂಟಾರು ಬಾಲನ್ ಅವರನ್ನು 2008 ರ ಮಾರ್ಚ್ 27 ರಂದು ರಾತ್ರಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕುಂಟಾರು ಬಸ್ಸು ನಿಲ್ದಾಣ ಸಮೀಪ ತಡೆದು, ಹೊರ ಗೆಳೆದು ಆರೋಪಿಗಳ ತಂಡ ಇರಿದು ಕೊಲೆ ಮಾಡಿತ್ತು.
- Advertisement -