Saturday, June 6, 2026
Homeಕರಾವಳಿ'ಡ್ರಗ್ ಪೆಡ್ಲರ್ ಜೊತೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕವಿದೆ'- ನಳಿನ್​ ಕುಮಾರ್ ಕಟೀಲ್ ಗಂಭೀರ ಆರೋಪ!..

‘ಡ್ರಗ್ ಪೆಡ್ಲರ್ ಜೊತೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕವಿದೆ’- ನಳಿನ್​ ಕುಮಾರ್ ಕಟೀಲ್ ಗಂಭೀರ ಆರೋಪ!..

- Advertisement -
- Advertisement -

ಬೆಂಗಳೂರು: ಉಪಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿರುವ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. “ಕಾಂಗ್ರೆಸ್-ಜೆಡಿಎಸ್​ನಲ್ಲಿ ತಳಮಳ ಶುರುವಾಗಿದೆ. ಮುಂದಿನ ದಿನದಲ್ಲಿ ಇಲ್ಲಿನ ಘಟಾನುಘಟಿ ನಾಯಕರು ಬಿಜೆಪಿ ಸೇರುತ್ತಾರೆ. ಅವರು ನಮ್ಮ ಸಂಪರ್ಕದಲ್ಲಿದ್ದಾರೆ” ಎಂದು ಅವರು ಹೊಸ ಬಾಂಬ್​ ಸಿಡಿಸಿದ್ದಾರೆ.

“ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಅದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಗಲಾಟೆ.ಎಸ್​ಡಿಪಿಐ ಕಾರ್ಯಕರ್ತರ ಮೇಲೆ ಇದ್ದ ಕೇಸ್ ಕೈ ಬಿಟ್ಟರು. ಕಾಂಗ್ರೆಸ್ ಅಧಿಕಾರ ಇಲ್ಲದಾಗ ಕೇವಲ ಒಬ್ಬನ ಮನೆಗೆ ಬೆಂಕಿ ಹಾಕೋದಲ್ಲ. ಬದಲಿಗೆ ರಾಜ್ಯಕ್ಕೆ ಬೆಂಕಿ ಹಾಕ್ತಾರೆ ಎಂದಿದ್ದಾರೆ.ಇನ್ನು ಡ್ರಗ್ಸ್ ಮುಕ್ತ ಮಾಡಿ ಸಿದ್ದರಾಮಯ್ಯನವರೇ ಎಂದರು ಜನರು.
ಅವರು ಆಗ ಸುಮ್ನೆ ಇದ್ದರು ಕಾರಣ ಡ್ರಗ್ ಪೆಡ್ಲರ್ ಜೊತೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕ ಇತ್ತು. ಹೀಗಾಗಿ ಸಿದ್ದರಾಮಯ್ಯ ಅಂದು ಕ್ರಮ ತೆಗೆದುಕೊಂಡಿಲ್ಲ” ಎಂದು ಕಾಂಗ್ರೆಸ್​ ವಿರುದ್ಧ ನಳಿನ್​ ಕುಮಾರ್ ಕಟೀಲ್ ಅವರು ಗಂಭೀರಆರೋಪ ಮಾಡಿದರು.

- Advertisement -

Latest News

error: Content is protected !!