Sunday, June 7, 2026
Homeತಾಜಾ ಸುದ್ದಿಕಾಂಗ್ರೆಸ್‌ ನಿಂದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ಆಗ್ರಹ

ಕಾಂಗ್ರೆಸ್‌ ನಿಂದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ಆಗ್ರಹ

- Advertisement -
- Advertisement -

ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರನ್ನು ಪದಚ್ಯುತಿಗೆ ಆಗ್ರಹಿಸಿ ಕಾಂಗ್ರೆಸ್ ಮಂಗಳವಾರ ನಿರ್ಣಯವನ್ನು ಮಂಡಿಸಿದೆ.

ಕಾಂಗ್ರೆಸ್‌ ಪಕ್ಷವು ಓಂ ಬಿರ್ಲಾ ಅವರು ಪಕ್ಷಪಾತೀಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಅವರ ಕ್ರಮಗಳು ಸದನದ ಕಾರ್ಯನಿರ್ವಹಣೆಗೆ ಗಂಭೀರ ಅಪಾಯ ಉಂಟುಮಾಡುತ್ತವೆ ಎಂದು ಹೇಳಿದೆ.

ಇನ್ನು ಸಂಸದ ಮುಹಮ್ಮದ್‌ ಜಾವೇದ್‌ ಈ ಕುರಿತು ನಿರ್ಣಯ ಮಂಡಿಸಿದ್ದು, ಸ್ಪೀಕರ್ ಬಿರ್ಲಾ ಅವರು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಮಹಿಳಾ ಸಂಸದೆಯರ ವಿರುದ್ಧ ಅನಾವಶ್ಯಕ ಆರೋಪಗಳನ್ನು ಮಾಡಿದ್ದಾರೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಧ್ವನಿ ಎತ್ತಿದ ವಿರೋಧ ಪಕ್ಷದ ಶಾಸಕರನ್ನು ಅಧಿವೇಶನದ ಪೂರ್ಣ ಅವಧಿಗೆ ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ನಿರ್ಣಯಕ್ಕೆ 118 ವಿರೋಧ ಪಕ್ಷದ ಸದಸ್ಯರು ಸಹಿ ಹಾಕಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

- Advertisement -

Latest News

error: Content is protected !!