Monday, July 7, 2025
Homeಕರಾವಳಿಮಂಗಳೂರುಬೆಳ್ತಂಗಡಿ:  ವಿಹೆಚ್ ಪಿ  ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲಿಸಿರೋದಕ್ಕೆ ಖಂಡನೆ

ಬೆಳ್ತಂಗಡಿ:  ವಿಹೆಚ್ ಪಿ  ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲಿಸಿರೋದಕ್ಕೆ ಖಂಡನೆ

spot_img
- Advertisement -
- Advertisement -

ಬೆಳ್ತಂಗಡಿ:   ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಗೋಹತ್ಯೆ ಪ್ರಕರಣವನ್ನು ಖಂಡಿಸಿ ಮಾಧ್ಯಮದಲ್ಲಿ ನೀಡಿದ ಹೇಳಿಕೆಯ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ. ಹಲವು ವರ್ಷಗಳಿಂದ ಅಕ್ರಮ ಗೋಸಾಗಾಟ, ಗೋಹತ್ಯೆ ಅಲ್ಲದೆ ಗೋಕಳ್ಳತನ ನಡೆಯುತ್ತಿದ್ದು ಕಳ್ಳರನ್ನು ಗೋಹಂತಕರನ್ನು ಬಂಧಿಸಲು ಹಾಗೂ ಗೋಹತ್ಯೆಯನ್ನು ನಿಲ್ಲಿಸಲು ಆಗದ ಸರಕಾರ ಹಾಗೂ ಕಾಂಗ್ರೆಸ್ ಪ್ರೇರಿತ ಅಧಿಕಾರಿಗಳು ಗೋಹತ್ಯೆ ವಿರುದ್ದ ಮಾತಾಡಿದ ಗೋಪ್ರೇಮಿಗಳ ಮೇಲೆ ಕೇಸು ಹಾಕಿರುವುದು ಖಂಡನೀಯ. ಗೋಹತ್ಯೆ ಲವ್ ಜಿಹಾದ್ ಕಾರಣದಿಂದ ಗಲಭೆಗಳು ನಡೆದು ಜಿಲ್ಲೆ ಪ್ರಕ್ಷುಬ್ದವಾಗಿರುವ ಘಟನೆಗಳು ನಡೆದಿತ್ತು. ಈ ಗೋಮಾಫಿಯಾದ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದ್ದು ಇದರ ಬಗ್ಗೆ ಮಾತನಾಡಿದನ್ನು ಕಾರಣವಾಗಿಟ್ಟುಕೊಂಡು ಕಾಂಗ್ರೆಸ್ಸಿನ ಓಲೈಕೆ ರಾಜಕೀಯಕೋಸ್ಕರ ಶರಣ್ ಪಂಪುವೆಲ್ ರವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ. ಇದರಿಂದ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಅಲ್ಲದೆ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಪ್ರವೇಶ ನಿರ್ಬಂಧಿಸಿದ್ದಾರೆ. ಇದೆಲ್ಲವೂ ಯಾರನ್ನೋ ಓಲೈಕೆ ಮಾಡಲು ಹಿಂದೂ ನಾಯಕರನ್ನು ಧಮನಿಸುವ ಕೆಲಸ ನಡೆಯುತ್ತಿದ್ದು. ಸಂವಿಧಾನಕ್ಕೆ ಆಶಯಕ್ಕೆ ವಿರೋಧವಾಗಿದ್ದು ಇದನ್ನು ಬಲವಾಗಿ ಖಂಡಿಸುತ್ತೇವೆ. ತಕ್ಷಣ ಅವರ ಮೇಲೆ ಹಾಕಿರುವ ಕೇಸನ್ನು ಮತ್ತು ನಿರ್ಬಂಧ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಆಗ್ರಹಿಸಿದರು.

- Advertisement -
spot_img

Latest News

error: Content is protected !!