Tuesday, June 6, 2023
Homeಕರಾವಳಿಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ:ಬೆಳ್ತಂಗಡಿ ಶಾಸಕರ ವಿರುದ್ಧ ಚುನಾವಣಾಧಿಕಾರಿಗೆ ಎರಡು ಪ್ರತ್ಯೇಕ ದೂರು

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ:ಬೆಳ್ತಂಗಡಿ ಶಾಸಕರ ವಿರುದ್ಧ ಚುನಾವಣಾಧಿಕಾರಿಗೆ ಎರಡು ಪ್ರತ್ಯೇಕ ದೂರು

- Advertisement -
- Advertisement -

ಬೆಳ್ತಂಗಡಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ‌ ಶೇಖರ್ ಲಾಯಿಲ ಮಾ.31 ರಂದು ಎರಡು ಪ್ರತ್ಯೇಕ  ದೂರನ್ನು ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ.

ಪ್ರಕರಣ -1: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪತ್ರಿಕೆಗೆ ಹಣ ಪಾವತಿ ಮಾಡಿ ಮಾ.30 ರಂದು ದಿನಪ್ರತಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಶಾಸಕರ ಸಾಧನೆ ಎಂದು ವರದಿ ಪ್ರಕಟಿಸಲಾಗಿದ್ದು. ಇದು ಮತದಾರರ ಮೇಲೆ ಪ್ರಭಾವ ಬೀರುವಂತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು. ಪತ್ರಿಕೆ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ಮಾ.31 ರಂದು ದೂರು ನೀಡಿದ್ದಾರೆ.

ಪ್ರಕರಣ-2 : ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಮಾ.30 ರಂದು ಸಂಜೆ 7 ಗಂಟೆಗೆ ಬಲಿಂಜೆ ಎಂಬಲ್ಲಿ ರಾತ್ರಿ ಸುಮಾರು 12:25 ರ ವರೆಗೆ ಸಭಾ ಕಾರ್ಯಕ್ರಮ ನಡೆದಿದ್ದು. ಈ ಕಾರ್ಯಕ್ರಮದಲ್ಲಿ ಊಟೋಪಾಚಾರವನ್ನು ಮತದಾರರಿಗೆ ಹಂಚಲಾಗಿದ್ದು‌. ಇದರಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದು. ಕಾರ್ಯಕ್ರಮಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಊಟೋಪಚಾರವನ್ನು ಹಂಚಲಾಗಿದೆ. ರಾತ್ರಿ 10 ಗಂಟೆಗೆ ಧ್ವನಿವರ್ಧಕ ಪರವಾನಿಗೆ ಪಡೆದು ಮಧ್ಯರಾತ್ರಿ 12:25 ರ ತನಕ ಕಾನೂನು ಬಾಹಿರ ಸಭಾ ಕಾರ್ಯಕ್ರಮ ಮಾಡಲಾಗಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ಕಾರ್ಯಕ್ರಮದ ಆಯೋಜಕರು ,ಭಾಗವಹಿಸಿದ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾ.31 ರಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಎರಡು ಪ್ರತ್ಯೇಕ ದೂರಿನ ಬಗ್ಗೆ ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ಎಫ್.ಐ.ಆರ್ ದಾಖಲಿಸಿಕೊಳ್ಳುವುದಾಗಿ ದೂರುದಾರ ಶೇಖರ್ ಲಾಯಿಲ ಅವರಿಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!